
ಮುದ್ದೇಬಿಹಾಳ: ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ತುಳಜಾಭವಾನಿಯನ್ನು ಪೂಜಿಸುತ್ತಾ ಬಂದಿರುವುದರಿಂದ ಶೂರ ಮತ್ತು ಧೀರ ಮಗನನ್ನು ಪಡೆಯಲು ಸಾಧ್ಯವಾಯಿತು ಎಂದು ತಹಶೀಲ್ದಾರ್ ಕೀರ್ತಿ ಚಾಲಕ ಹೇಳಿದರು.
ತಾಲ್ಲೂಕು ಆಡಳಿತದಿಂದ ಈಚೆಗೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ತುಳಜಾಭವಾನಿಯ ಆರಾಧಕರಾಗಿದ್ದ ಶಿವಾಜಿ ಅವರಿಗೂ ದೇವಿಯ ಆಶೀರ್ವಾದವಾಗಿತ್ತು. ದೇವಿಯು ಪ್ರಸನ್ನಳಾಗಿ ಖಡ್ಗವನ್ನು ನೀಡಿದ್ದರು ಎಂಬುದು ಇತಿಹಾಸವಿದೆ. ಸಾಹಸಿ ಪರಾಕ್ರಮಿಯಾಗಿದ್ದ ಶಿವಾಜಿ ಮಹಾರಾಜರು ಮತ್ತು ಅವರ ತಾಯಿಯವರ ಆದರ್ಶ ಇಂದಿನ ತಾಯಂದಿರು ಪಾಲಿಸಬೇಕು ಎಂದರು.
ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಉಪನ್ಯಾಸಕ ರಾಜನಾರಾಯಣ ನಲವಡೆ, ಉದಯ ರಾಯಚೂರು, ಮರಾಠಾ ಸಮಾಜದ ಗೌರವ ಅಧ್ಯಕ್ಷ ರಾಜೇಂದ್ರ ಭೋಸಲೆ, ಉಪಾಧ್ಯಕ್ಷ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ರಮೇಶ ತೊರಥ, ರವಿ ಭೋಸಲೆ, ಕೃಷ್ಣಾಜಿ ಪವಾರ, ಭರತ ಭೋಸಲೆ, ಮಹಾದೇವ ಗಾಯಕವಾಡ, ರಾಘವೇಂದ್ರ ಘಾಟಗೆ, ಶಿವಾಜಿ ಬಿಜಾಪುರ, ಹಣಮಂತ ನಲವಡೆ, ಮಾರುತಿ ನಲವಡೆ, ರಾಘವೇಂದ್ರ ನಲವಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.