ADVERTISEMENT

ಇಂದು ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 18:19 IST
Last Updated 14 ಆಗಸ್ಟ್ 2022, 18:19 IST
ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಭಾನುವಾರ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣದ ಅಂತಿಮ ಹಂತದ ಕಾಮಗಾರಿ ನಡೆಯಿತು
ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಭಾನುವಾರ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣದ ಅಂತಿಮ ಹಂತದ ಕಾಮಗಾರಿ ನಡೆಯಿತು   

ಹೊಸಪೇಟೆ (ವಿಜಯನಗರ): ದೇಶದ ಅತಿ ಎತ್ತರದ 405 ಅಡಿ ಎತ್ತರದ ಧ್ವಜಸ್ತಂಭವನ್ನು ನಗರದ ಮುನ್ಸಿಪಲ್‌ ಮೈದಾನದಲ್ಲಿ ಅಳವಡಿಸಲಾಗಿದ್ದು, ಸೋಮವಾರ (ಆ.15) ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ತ್ರಿವರ್ಣ ಧ್ವಜ ಹಾರಿಸುವ ಈ ಮೂಲಕ ಈ ಸ್ತಂಭವನ್ನು ಉದ್ಘಾಟಿಸುವರು.

ಈವರೆಗೆ ಬೆಳಗಾವಿಯಲ್ಲಿನ 361 ಅಡಿ ಎತ್ತರದ ಧ್ವಜಸ್ತಂಭ ದೇಶದ ಎತ್ತರದ ಧ್ವಜಸ್ತಂಭವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಆ ದಾಖಲೆ ವಿಜಯನಗರದ ಪಾಲಾಗಲಿದೆ.

ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ಈ ಸ್ತಂಭವನ್ನು ನಿರ್ಮಿಸಲಾಗಿದ್ದು, 120X80 ಅಡಿ ಅಳತೆಯ ಧ್ವಜ ತಯಾರಿಸಲಾಗಿದೆ. ಪುಣೆಯ ಬಜಾಜ್‌ ಕಂಪನಿಯ 85 ನುರಿತ ಕಾರ್ಮಿಕರು ಒಂದು ವಾರದಿಂದ ಹಗಲಿರುಳು ಶ್ರಮಿಸಿ ಧ್ವಜ ಸ್ತಂಭದ 13 ಬಿಡಿಭಾಗಗಳನ್ನು ಜೋಡಿಸಿದ್ದಾರೆ.

ADVERTISEMENT

ಈ ಧ್ವಜಸ್ತಂಭದ ಅಡಿ ಸೋಮ ವಾರ 5000 ಮಕ್ಕಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಟೋಪಿ ಧರಿಸಿ ತ್ರಿವರ್ಣದ ರಂಗು ಮೂಡಿಸಲಿದ್ದಾರೆ. ‘ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲು 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಲಾಗಿದೆ’ ಎಂದು ಸಚಿವ ಆನಂದ್‌ ಸಿಂಗ್‌ ಭಾನುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.