
ನಿಡಗುಂದಿ: ಕಳೆದ ತಿಂಗಳು ಕಳುವಾಗಿದ್ದ ಶುಭಂ ಟ್ರಾನ್ಸಪೋರ್ಟ್‌ಗೆ ಸಂಬಂಧಿಸಿದ ಕಂಟೈನರ್ ಟ್ರಕ್‌ನಲ್ಲಿದ್ದ ಸುಮಾರು ₹30 ಲಕ್ಷ ಮೌಲ್ಯದ ಗೋದ್ರೇಜ್ ಕಂಪನಿಯ 525 ಬಾಕ್ಸ್‌ಗಳ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ನಿಡಗುಂದಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ನಿಡಗುಂದಿ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ‘ಡಿ. 20ರಂದು ಗೋದ್ರೇಜ್ ಕಂಪನಿಗೆ ಸಂಬಂಧಿಸಿದ ಸುಮಾರು 1,323 ಬಾಕ್ಸ್‌ಗಳನ್ನು ಲೋಡ್ ಮಾಡಿಕೊಂಡು ಪಾಂಡಿಚೇರಿಯಿಂದ ಮಹಾರಾಷ್ಟ್ರದ ಜೀವಂಡಿಗೆ ಹೊರಟ್ಟಿದ್ದ ಶುಭಂ ಟ್ರಾನ್ಸಪೋರ್ಟ್‌ಗೆ ಸಂಬಂಧಿಸಿದ ಕಂಟೇನರ್ ಟ್ರಕ್‌ನಲ್ಲಿ ಆಲಮಟ್ಟಿಯ ಬಳಿ 525 ಬಾಕ್ಸ್ ಗಳನ್ನು ಕಳವು ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಕುರಿತು ನಿಡಗುಂದಿ ಸಿಪಿಐ ಶರಣಗೌಡ ಗೌಡರ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಚುರುಕಿನ ಕಾರ್ಯಾಚರಣೆ ನಡೆಸಿತು. ಜ. 21 ರಂದು ಕಳವು ಆರೋಪಿ ರಾಜಸ್ಥಾನ ಮೂಲದ ಪಾಲರಾಮ ತಂದೆ ತೇಜಾರಾಮ (32) ನನ್ನು ವಶಕ್ಕೆ ಪಡೆದು ಆತನಿಂದ ಕಳುವಾಗಿದ್ದ ಗೋದ್ರೇಜ್ ಕಂಪನಿಯ ವಿವಿಧ ವಸ್ತುಗಳಿದ್ದ ಸುಮಾರು ₹30 ಲಕ್ಷ ಮೌಲ್ಯದ ವಸ್ತುಗಳಿದ್ದ 525 ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ, ಪಿಎಸ್ಐಗಳಾದ ಶಿವಾನಂದ ಪಾಟೀಲ, ಎ.ಕೆ. ಸೊನ್ನದ ಹಾಗೂ ಎಲ್ಲ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.