ವಿಜಯಪುರ: ಅಖಿಲ ಭಾರತ ಬೌದ್ಧ ವೇದಿಕೆ ಹಾಗೂ ವಿವಿಧ ಬೌದ್ಧ ಸಂಘಟನೆಗಳ ಸಹಯೋಗದಲ್ಲಿ ಬಿ.ಟಿ ಕಾಯ್ದೆ 1947 (ಬಿಟಿಎಂಸಿ) ವಿರೋಧಿಸಿ ಸೆ.17 ರಂದು ಬಿಹಾರದ ಪಾಟ್ನಾದಲ್ಲಿ 5 ಲಕ್ಷ ಬೌದ್ಧರ ಸಾರ್ವಜನಿಕ ಸಭೆ ಮತ್ತು ಶಾಂತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬೌದ್ಧ ವೇದಿಕೆ ರಾಜ್ಯ ಸಂಯೋಜಕ ವೆಂಕಟೇಶ ಮಗ್ಯಾನವರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.17 ರಂದು ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಗೆ ದೇಶದ ಬುದ್ಧಿಜೀವಿಗಳು, ಅಂಬೇಡ್ಕರ್ ಅನುಯಾಯಿಗಳು ಬೆಂಬಲ ಸೂಚಿಸಿದ್ದು, ರಾಜ್ಯದಲ್ಲಿ ಪೂರ್ವಭಾವಿ ಸಭೆಯಲ್ಲಿ ಸೆ.8 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಸಂಘಟನೆ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಭಗವಾನ್ ಬುದ್ಧನು ವಿಷ್ಣುವಿನ ಅವತಾರ, ಬೌದ್ಧ ಧರ್ಮವೂ ಹಿಂದೂ ಧರ್ಮದ ಭಾಗವೆಂದು ದಿಕ್ಕು ತಪ್ಪಿಸಲಾಗುತ್ತಿದೆ. ಈ ಅನ್ಯಾಯ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಪಡಿಸಿ, ಈ ವಿಹಾರವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬುದ್ಧವಿಹಾರ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಬಸವರಾಜ ಹೋಳಕರ್, ಚನ್ನು ಕಟ್ಟಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.