ADVERTISEMENT

ಕೊಲ್ಹಾರ: ಪಿಕೆಪಿಎಸ್ ಕಟ್ಟಡ, ಗೋದಾಮು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:12 IST
Last Updated 31 ಮೇ 2025, 13:12 IST
ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಕೊಲ್ಹಾರ: ತಾಲ್ಲೂಕಿನ ಕುಪಕಡ್ಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ಪಿಕೆಪಿಎಸ್)  ಕಟ್ಟಡ ಹಾಗೂ ಗೋದಾಮವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೆಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ ಈಚೆಗೆ ಉದ್ಘಾಟಿಸಿದರು.

ರಾಜಶೇಖರ ಗುಡದಿನ್ನಿ ಮಾತನಾಡಿ, ‘ 1957ರಲ್ಲಿ ಪ್ರಾರಂಭವಾದ ಸಂಘವು ಸಂಸ್ಥಾಪಕ ಅಧ್ಯಕ್ಷ ದಿ. ಗಿರಮಲ್ಲಪಗೌಡ ಬಿರಾದಾರ ಅವರ ಆಶಯದಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಹಳ್ಳದ ಗೆಣ್ಣೂರ ಹಾಗೂ ಕುಪಕಡ್ಡಿಯ 1,270 ಸದಸ್ಯರನ್ನು ಹೊಂದಿದೆ’ ಎಂದರು.

‘₹32 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ 272 ಸಹಕಾರ ಸಂಘಗಳಿದ್ದು, 232 ಸಂಘಗಳು ಸ್ವಂತ ಕಟ್ಟಡ ಹೊಂದಿವೆ’  ಎಂದು ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿಕೆಪಿಎಸ್ ಅಧ್ಯಕ್ಷೆ ಕಸ್ತೂರಿಬಾಯಿ ಸಂಗನಗೌಡ ಬಿರಾದಾರ, ಮಾಜಿ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಭಾವುರಾವ ಕುಲಕರ್ಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರನಗೌಡ ಬಿರಾದಾರ, ತಾನಾಜಿ ನಾಗರಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.