
ಸಿಂದಗಿ: ‘ಪ್ರಜಾವಾಣಿ’ ಆರಂಭದಿಂದ ಇಂದಿನವರೆಗೂ ತನ್ನ ಬದ್ಧತೆ, ಮೌಲ್ಯ ಉಳಿಸಿಕೊಂಡು ಬರುತ್ತಿರುವ ಏಕೈಕ ಕನ್ನಡ ದಿನ ಪತ್ರಿಕೆಯಾಗಿದೆ ಎಂದು ಪ್ರೊ.ಅರವಿಂದ ಮನಗೂಳಿ ಮೆಚ್ಚುಗೆ ಹೇಳಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 15ನೇ ವರ್ಷದ ‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಎಂದರೆ ‘ಪ್ರಜಾವಾಣಿ’ ಎನ್ನುವಷ್ಟು ಭಾಷಾ ಶುದ್ಧತೆ ಹೊಂದಿದೆ. ಪತ್ರಿಕೆ ಅಕ್ಷರಗಳು ನೋಡಲು ಅತೀ ಸುಂದರ, ಓದಲು ವಿಷಯ ಮೌಲ್ಯಾಧಾರಿತವಾಗಿದೆ. ಎಡ, ಬಲ ಎರಡೂ ಸಿದ್ಧಾಂತಗಳಲ್ಲಿ ಶ್ರೇಷ್ಠತೆ ಉಳಿಸಿಕೊಂಡಿದೆ. ಭಾನುವಾರದ ಸಾಪ್ತಾಹಿಕ ಪುರವಣಿ ಓದಿದರೆ ವಿಶ್ವ ಪರ್ಯಟನೆ ಮಾಡಿದ ಅನುಭವ ಉಂಟಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗ ಚೌದರಿ, ಯಾವುದೇ ರಾಜಕೀಯ ಪಕ್ಷ, ಯಾವೊಂದು ಸಿದ್ದಾಂತಕ್ಕೂ ಜೋತುಬೀಳದೆ ಸತ್ಯದ ಪರ ನಿಂತುಕೊಂಡ ಪತ್ರಿಕೆ ಪ್ರಜಾವಾಣಿ ಎಂದರು.
ಪಿಇಎಸ್ ಕಾಲೇಜು ಪ್ರಾಚಾರ್ಯ ಆರ್.ಬಿ.ಗೋಡಕರ, ಪ್ರಜಾವಾಣಿ ಅಭಿವೃದ್ಧಿಪರ ಚಿಂತನೆ ಮಾಡುವ ಜ್ಞಾನದ ಜ್ಯೋತಿಯಾಗಿದೆ ಎಂದರು.
ಪದ್ಮರಾಜ ಮಹಿಳಾ ಪದವಿ ಕಾಲೇಜು ಉಪನ್ಯಾಸಕಿ ಹೇಮಾ ಹಿರೇಮಠ ಮಾತನಾಡಿ, ಟಿವಿ, ಮೊಬೈಲ್ ಭರಾಟೆಯಲ್ಲಿಯೂ ವಿದ್ಯಾರ್ಥಿಗಳನ್ನು ಓದಲು ಹಚ್ಚಿದ ಪತ್ರಿಕೆ ಅದು ಪ್ರಜಾವಾಣಿವೊಂದೇ ಎಂದು ತಿಳಿಸಿದರು.
ಕುವೆಂಪು ವಿದ್ಯಾಲಯದ ಸಂಚಾಲಕ ಮಹೇಶ ದುತ್ತರಗಾವಿ, ನಮ್ಮ ವಿದ್ಯಾಲಯದಲ್ಲಿ ಪ್ರತಿ ವರ್ಷ ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಮುಂದುವರೆಸಿಕೊಂಡು ಹೊರಟಿರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳಾದ ನಿಂಗಣ್ಣ ನಡುವಿನಮನಿ, ಶರಣಬಸಪ್ಪ ಹಂಚಿನಾಳ, ಅಬ್ದುಲ್ ಪಟೇಲ್ ಕಾಚಾಪೂರ ಸಮೀಕ್ಷೆ ಕುರಿತಾದ ಮೆಚ್ಚುಗೆ ಮಾತುಗಳನ್ನಾಡಿದರು.
ಬಸವೇಶ್ವರ ವಿದ್ಯಾಪ್ರಸಾರ ಸಮಿತಿ ಕಾರ್ಯದರ್ಶಿ ಸತೀಶ ಹಿರೇಮಠ, ಶಿಕ್ಷಕ ಎಸ್.ಎ.ರಾಠೋಡ, ಮುಖ್ಯಶಿಕ್ಷಕ ಜಗದೀಶ ಪಾಟೀಲ, ಕುಮಾರ ಮಠ, ಡಾ.ಪ್ರಕಾಶ ಮೂಡಲಗಿ, ಪತ್ರಕರ್ತ ಶಾಂತೂ ಹಿರೇಮಠ ಇದ್ದರು.
ವಸ್ತುನಿಷ್ಠ ಭಾಷಾಪರಿಶುದ್ಧತೆ ಭಾಷಾ ಪ್ರೌಢಿಮೆ ವ್ಯಾಕರಣಶುದ್ದಿ ಇವೆಲ್ಲ ವಿಶೇಷತೆ ಇರುವುದು ಪ್ರಜಾವಾಣಿಯಲ್ಲಿ ಮಾತ್ರ.ಮಹೇಶ ದುತ್ತರಗಾವಿ ಸಂಚಾಲಕ ಕುವೆಂಪು ವಿದ್ಯಾಲಯ ಸಿಂದಗಿ
ಪ್ರಜಾವಾಣಿ ವಿಭಿನ್ನ ಪತ್ರಿಕೆ ಪತ್ರಿಕಾಧರ್ಮ ಕಾಪಾಡಿಕೊಂಡು ಬಂದಿದೆ. ಯಶಸ್ಸಿನ ಗುರಿ ತಲುಪಲು ವಿದ್ಯಾರ್ಥಿ ಸ್ನೇಹಿ ಪತ್ರಿಕೆ.ವೈಭವೀಕರಣವಿಲ್ಲದ ಪತ್ರಿಕೆಯಾಗಿದೆ.ಜಗದೀಶ ಪಾಟೀಲ ಮುಖ್ಯಶಿಕ್ಷಕ ಜ್ಞಾನಭಾರತಿ ಪ್ರೌಢಶಾಲೆ ಸಿಂದಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.