ದೇವರಹಿಪ್ಪರಗಿ: ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಇದೇ 13 ರಂದು ಹಮ್ಮಿಕೊಳ್ಳಲಾಗುತ್ತಿರುವ ಪ್ರತಿಭಟನಾ ಮೆರವಣಿಗೆಯ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಪಾಲ್ಗೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣವನ್ನು ಖಂಡಿಸಲಾಯಿತು.ಜೊತೆಗೆ ಇದೇ 13 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಹೊಸನಗರದ ಟಿಪ್ಪು ಸುಲ್ತಾನ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಳ್ಳುವ ಕುರಿತು ಚರ್ಚಿಸಿ, ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ಮುನೀರ್ ಅಹ್ಮದ್ ಮಳಖೇಡ, ಚಂದ್ರಶೇಖರ ಕಡಕೋಳ, ರಾಜಕುಮಾರ ಸಿಂದಗೇರಿ, ರಮೇಶ ದಳವಾಯಿ, ಹುಯೋಗಿ ತಳ್ಳೋಳ್ಳಿ, ಸುನೀಲ ಮಾಗಿ, ಗುರುನಾಥ ಮುರುಡಿ, ಸರಿತಾ ನಾಯಿಕ, ಪರಶುರಾಮ ನಾಯ್ಕೋಡಿ ಮಾತನಾಡಿದರು.
ಬಸವರಾಜ ಇಂಗಳಗಿ, ಶಂಕರ ಜಮಾದಾರ, ಶಿವರಾಜ ತಳವಾರ, ಇಕ್ಬಾಲ್ ಬಿಜಾಪೂರ, ದಾದಾ ತಾಂಬೋಳಿ, ಆನಂದ ವಗ್ಗರ, ಪ್ರಭು ಕಡಕೋಳ, ದಯಾನಂದ ರಾಠೋಡ, ಮಲಕಪ್ಪ ಬಾಗೇವಾಡಿ, ಶಿವಾನಂದ ವಾಲಿಕಾರ, ರಾಘವೇಂದ್ರ ಗುಡಿಮನಿ, ಸಾಯಬಣ್ಣ ದಳಪತಿ, ನವೀನ ಗುತ್ತೇದಾರ, ಭೀರು ಹಳ್ಳಿ, ಪರಶುರಾಮ ಬಡಿಗೇರ, ದಾದಾ ಶಹಾಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.