ADVERTISEMENT

ಗ್ರಾಮ ಪಂಚಾಯ್ತಿ ನೌಕರರ ಪ್ರತಿಭಟನೆ

ಕನಿಷ್ಠ ವೇತನ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 14:51 IST
Last Updated 21 ಸೆಪ್ಟೆಂಬರ್ 2020, 14:51 IST
ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ವಿಜಯಪುರ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು 
ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ವಿಜಯಪುರ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು    

ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು ಸಂಯೋಜಿತ)ದಿಂದ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ಗ್ರಾಮ ಪಂಚಾಯ್ತಿ ನೌಕರರ ಬೇಡಿಕೆಗಳನ್ನುಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ತಮ್ಮ ವ್ಯಾಪ್ತಿಯ ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕಾರ್ಮಿಕ ಇಲಾಖೆ ನಿಗದಿಪಡಿಸಿರುವಂತೆ ಬಿಲ್ ಕಲೆಕ್ಟರ್ ಗುಮಾಸ್ತ, ಕಂಪ್ಯೂಟರ್ ಆಪರೇಟರ್‌ಗಳಿಗೆ ₹13,815, ಪಂಪ್‌ ಆಪರೇಟರ್‌ಗಳಿಗೆ ₹12,281, ಸಿಪಾಯಿ, ಜವಾನ ₹11,703 ಮತ್ತು ಸ್ವಚ್ಛತಾಗಾರರಿಗೆ ₹14,563 ವೇತನ ಜಾರಿಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಾಕಿ ವೇತನ ತೆರಿಗೆ ಸಂಗ್ರಹದಲ್ಲಿ 14ನೇ ಹಾಗೂ 15ನೇ ಹಣಕಾಸು ಆಯೋಗದ ಹಣದಲ್ಲಿ ಬಾಕಿ ಉಳಿದ ಸಿಬ್ಬಂದಿ ವೇತನ ಪಾವಸತಿಸುವಂತಾಗಬೇಕು. ನಿವೃತ್ತಿಯಾದವರಿಗೆ 15 ತಿಂಗಳು ಗ್ರಾಚ್ಯುಟಿ ಕೊಡಬೇಕು. ಇಎಫ್‍ಎಂಎಸ್ ಬಾಕಿ ಉಳಿದ ಕಸಗುಡಿಸುವ ಮತ್ತು ಪಂಪ್ ಆಪರೇಟರ್ ಹಾಗೂ ಇತರೆ ಸಿಬ್ಬಂದಿಗಳನ್ನು ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಪಂಪ್‌ ಆಪರೇಟರ್‌ಗಳಿಂದ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು. ಸರ್ಕಾರದ ಆದೇಶದಂತೆ ಅನುಕಂಪದ ನೇಮಕಾತಿ ಮಾಡಲು ನಿರ್ದೇಶನ ನೀಡಬೇಕು ಎಂದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ರಾಜ್ಯ ಸಮಿತಿ ಸದಸ್ಯ ವಿಠ್ಠಲ ಹೊನಮೋರೆ ಮಾತನಾಡಿ, ಹೊಸದಾಗಿ ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ಮಾಡಿಕೊಳ್ಳುವುದನ್ನು ತಡೆಯಬೇಕು. ಈಗಾಗಲೇ ನೇಮಕಾತಿ ಮಾಡಿಕೊಂಡವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ನೇಮಕಾತಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಬಿಲ್ ಕಲೆಕ್ಟರ್‌ರಿಂದ ಗ್ರೇಡ್ 2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಸರ್ಕಾರಿ ಆದೇಶಗಳನ್ನು ಜಾರಿ ಮಾಡದೆ ಪಿಡಿಒಗಳ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸುರೇಖಾ ರಜಪೂತ, ಸಂಗಪ್ಪ ಸೀತಿಮನಿ, ಮಲ್ಲಪ್ಪ ಹೊಸಕೇರಿ, ಶೇಖು ಲಮಾಣಿ, ಸಂಗಪ್ಪ ಗಂಗಶೆಟ್ಟಿ, ಸಂಗಪ್ಪ ಡಿಗ್ಗಾವಿ, ನಿಂಗಪ್ಪ ಮಾದರ, ರಮೇಶ ಕರಿಗಾರ, ಶಂಕರ ದಂಡಿನ, ನಾಗಪ್ಪ ತೆಲಸಂಗ, ಪ್ರಭಾಕರ ಬಿರಾದಾರ, ಚಿಕ್ಕಯ್ಯ ಹೋಕಳೆ, ಶ್ರೀಕಾಂತ ಪೂಜಾರಿ, ಶಿವಪ್ಪ ಲಾಡರ, ಗುರಣ್ಣ ಮನಗೂಳಿ, ಕಾಶಿನಾಥ ಜಾಧವ, ಯಲ್ಲಪ್ಪತೋಳೆ, ಸದಾಶಿವ ಅಂಗಡಿ, ರಫೀಕ ವಾಲೀಕಾರ, ಶ್ರೀಶೈಲ ಕವಿ, ಚಂದ್ರಶೇಖರ ವಾಲಿಕಾರ, ಮಲ್ಲಿಕಾರ್ಜು ಮಾದರ, ಎಂ.ಕೆ.ಚಳ್ಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.