ADVERTISEMENT

ಬತ್ತಿಹೋದ ಕೊಳವೆಬಾವಿಗಳು ಪುನಶ್ಚೇತನ: ಎಂ.ಬಿ.ಪಾಟೀಲ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 14:44 IST
Last Updated 29 ಏಪ್ರಿಲ್ 2025, 14:44 IST
ಬಬಲೇಶ್ವರ ತಾಲ್ಲೂಕಿನ ಹೆಬ್ಬಾಳಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಚಂದ್ರಗಿರಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು. ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಮಠದ ಸಿದ್ಧಲಿಂಗಯ್ಯ ರುದ್ರಯ್ಯ ಹಿರೇಮಠ, ಚನ್ನಪ್ಪ ಕೊಪ್ಪದ ಇದ್ದಾರೆ
ಬಬಲೇಶ್ವರ ತಾಲ್ಲೂಕಿನ ಹೆಬ್ಬಾಳಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಚಂದ್ರಗಿರಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು. ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಮಠದ ಸಿದ್ಧಲಿಂಗಯ್ಯ ರುದ್ರಯ್ಯ ಹಿರೇಮಠ, ಚನ್ನಪ್ಪ ಕೊಪ್ಪದ ಇದ್ದಾರೆ   

ಬಬಲೇಶ್ವರ: ‘ಜಿಲ್ಲೆಯಲ್ಲಿ ಬತ್ತಿ ಹೋಗಿದ್ದ ಲಕ್ಷಾಂತರ ಕೊಳವೆಬಾವಿಗಳು ನೀರಾವರಿ ಯೋಜನೆಗಳಿಂದಾಗಿ ಪುನಶ್ಚೇತನಗೊಂಡಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಲ್ಲೂಕಿನ ಹೆಬ್ಬಾಳಟ್ಟಿ ಗ್ರಾಮದ ಶ್ರೀ ಚಂದ್ರಗಿರಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದ್ದು, ರಾತ್ರಿ ವೇಳೆ ಹೆಬ್ಬಾಳಟ್ಟಿ ಗ್ರಾಮಕ್ಕೆ ನೀರು ತಲುಪಲಿದೆ. 5ಎ ಮತ್ತು 5ಬಿ ಲಿಫ್ಟ್ ಹಾಗೂ 15 ನೇ ವಿತರಣಾ ಕಾಲುವೆ ನಿರ್ಮಿಸುವ ಮೂಲಕ ಈ ಭಾಗದಲ್ಲಿ ಬಾಕಿ ಉಳಿದ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದರಿಂದ ಹೆಬ್ಬಾಳಟ್ಟಿ ಗ್ರಾಮದ 7 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ’ ಎಂದು ಹೇಳಿದರು.

ADVERTISEMENT

‘ಟೊಯೊಟಾ ಕಿರ್ಲೋಸರ್ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ಗ್ರಾಮದಲ್ಲಿ 5 ಶಾಲಾ ಕೊಠಡಿ ನಿರ್ಮಿಸಲಿದೆ. ರೈತರು ತಮ್ಮ ಮಕ್ಕಳ ಜೀವನ ರೂಪಿಸಿಕೊಳ್ಳಲು ಉತ್ತಮ ಶಿಕ್ಷಣ ನೀಡಬೇಕು’ ಎಂದು ಅವರು ಹೇಳಿದರು.

‘ಈಗ ಕೈಗಾರಿಕೆ ಸಚಿವನಾಗಿ ಜಿಲ್ಲೆಗೆ ಕೈಗಾರಿಕೆಗಳನ್ನು ತರುತ್ತಿದ್ದೇನೆ. ಅಲ್ಲದೇ, ಈಗಾಗಲೇ ಉದ್ಯೋಗ ಮೇಳ ನಡೆಸಿ ಟೊಯೊಟಾ ಕಂಪನಿಯಲ್ಲಿ ಸುಮಾರು 500 ಯುವಕರಿಗೆ ಕೆಲಸ ಕೊಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಫಾಕ್ಸ್‌ಕಾನ್ ಕಂಪನಿಯವರು ಉದ್ಯೋಗ ಮೇಳ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದರು.

ಹೊಳೆಹಂಗರಗಿ ಗ್ರಾಮದಲ್ಲಿ ಸಂಗೊಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿ ಹಾಗೂ ಶ್ರೀ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.

‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಪರವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ವೀರಯೋಧನಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಕೇವಲ ಒಂದು ಸಮಾಜ ಮತ್ತು ಕರ್ನಾಟಕಕ್ಕೆ ಸೀಮಿತರಲ್ಲ. ಅವರು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಶ್ರೀ ಭೀರಲಿಂಗೇಶ್ವರ ದೇವರು ಎಲ್ಲರಿಗೂ ಉತ್ತಮ ಆರೋಗ್ಯ, ಆಯುಷ್ಯ, ಸಮೃದ್ಧಿ ನೀಡಲಿ. ಮಳೆ ಮತ್ತು ಬೆಳೆ ಚೆನ್ನಾಗಿರಲಿ. ನಾಡಿದಾದ್ಯಂತ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಲಿ’ ಎಂದು ಅವರು ಹೇಳಿದರು.

ಹೆಬ್ಬಾಳಟ್ಟಿ ಗ್ರಾಮದ ಕಾರ್ಯಕ್ರಮದಲ್ಲಿ ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಮಠದ ಸಿದ್ಧಲಿಂಗಯ್ಯ ರುದ್ರಯ್ಯ ಹಿರೇಮಠ, ಅಶೋಕ ಕಾಖಂಡಕಿ, ಎಸ್.ಪಿ.ತಾಂವಶಿ, ಚನ್ನಪ್ಪ ಕೊಪ್ಪದ, ರಮೇಶ ದೇಸಾಯಿ, ರಫೀಕ್ ಸೋನಾರ್, ಜಾಫರ್ ಇನಾಮದಾರ, ವಿದ್ಯಾರಾಣಿ ತುಂಗಳ, ಭಾರತಿ ಹಿರೇಮಠ ಮತ್ತು ಹೊಳೆಹಂಗರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಆನಂದಕುಮಾರ ದೇಸಾಯಿ, ಬಸವರಾಜ ದೇಸಾಯಿ, ಭೀಮಶಿ ನಾಗರಾಳ, ಎಂ. ಜೆ. ಯಂಕಂಚಿ, ಪ್ರಶಾಂತ ದೇಸಾಯಿ, ಸದಾಶಿವ ಬೀಳಗಿ, ಭೀರಪ್ಪ ಜುಮನಾಳ, ಕಲ್ಲನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.