ADVERTISEMENT

ಕಾಂಗ್ರೆಸ್ ನಾಯಕಿ ರೇಷ್ಮಾ ಕೊಲೆ ಪ್ರಕರಣ: ಆಡಿಯೊ ಬಹಿರಂಗ; ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 18 ಮೇ 2019, 14:28 IST
Last Updated 18 ಮೇ 2019, 14:28 IST
ರೇಷ್ಮಾ
ರೇಷ್ಮಾ   

ವಿಜಯಪುರ:ನಿಗೂಢವಾಗಿ ಕೊಲೆಯಾಗಿರುವ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಮೂರು ಆಡಿಯೊ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದ್ದು, ಚರ್ಚೆಗೆ ಗ್ರಾಸವಾಗಿವೆ.

ರೇಷ್ಮಾ ಯಾರ ಜತೆ ಮಾತನಾಡಿದ್ದಾರೆ. ಯಾವಾಗ ಮಾತನಾಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. 3.11 ನಿಮಿಷ, 1.53 ಹಾಗೂ 5.57 ನಿಮಿಷದ ಮಾತುಕತೆಯ ಆಡಿಯೊಗಳು, ಈ ಭಾಗದ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ರೇಷ್ಮಾ ಈ ಆಡಿಯೊ ಕ್ಲಿಪ್ಪಿಂಗ್‌ಗಳಲ್ಲಿ ಅಶ್ಲೀಲ, ಅವಾಚ್ಯ ಶಬ್ದ ಬಳಸಿ, ಸೊಲ್ಲಾಪುರದ ಎಐಎಂಐಎಂ ಮುಖಂಡ ತೌಫೀಕ್‌ ಶೇಖ್‌ ಹಾಗೂ ಆತನ ಪತ್ನಿ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

‘ನನ್ನ ವಿರುದ್ಧ ಸುಳ್ಳು ಮಾತಾಡ್ತೀರಿ. ಸುಳ್ಳು ಪ್ರಕರಣ ದಾಖಲಿಸಿದ್ದೀರಿ. ಕಾಂಗ್ರೆಸ್‌ನವರಿಂದ ಹಣ ಪಡೆದಿದ್ದೇನೆ ಎಂಬುದನ್ನು ಸಾಬೀತುಪಡಿಸಿ. ಸೊಲ್ಲಾಪುರದಲ್ಲಿ ನಾನು ದಾಖಲಿಸಿರುವ ಪ್ರಕರಣವನ್ನು ಯಾವುದೇ ಕಾರಣದಿಂದಲೂ ವಾಪಸ್ ಪಡೆಯಲ್ಲ. 16, 17ರಂದು ನಡೆದ ಪ್ರಕರಣವೇ ಬೇರೆ. ತೌಫೀಕ್‌ ಪೈಲಾನ್‌ನಂಥಹ ಹಲವರನ್ನು ನಾನು ನೋಡಿದ್ದೇನೆ. ಅವನೊಬ್ಬ ಅಂಜುಬುರುಕ’ ಎಂದೆಲ್ಲಾ ಮಾತನಾಡಿರುವ ಆಡಿಯೊ ಕ್ಲಿಪ್ಪಿಂಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಎರಡು ತಂಡ ರಚನೆ:

‘ಆಡಿಯೊ ಕ್ಲಿಪ್ಪಿಂಗ್ ಬಹಿರಂಗವಾಗಿರುವ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಕೊಲೆಗಾರನ ಪತ್ತೆಗೆ ಎರಡು ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯಾಚರಣೆ ಬಿರುಸಿನಿಂದ ನಡೆದಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.