ADVERTISEMENT

ಇಂಡಿ: ಖೇಡಗಿ ಗ್ರಾ.ಪಂಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 6:01 IST
Last Updated 28 ಅಕ್ಟೋಬರ್ 2025, 6:01 IST
<div class="paragraphs"><p>ಇಂಡಿ ತಾಲೂಕಿನ ಖೇಡಗಿ ಗ್ರಾ.ಪಂ ಬೀಗ ಹಾಕಿ ಭೂಯ್ಯಾರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು</p></div>

ಇಂಡಿ ತಾಲೂಕಿನ ಖೇಡಗಿ ಗ್ರಾ.ಪಂ ಬೀಗ ಹಾಕಿ ಭೂಯ್ಯಾರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು

   

ಇಂಡಿ: ಭೂಯ್ಯಾರ ಗ್ರಾಮದಿಂದ ಸಾತಲಗಾಂವ, ಲಾಳಸಂಗಿ ಮತ್ತು ನಾಗರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿ  ಮಾಡಬೇಕೆಂದು ಆಗ್ರಹಿಸಿ ಭೂಯ್ಯಾರ ಗ್ರಾಮಸ್ಥರು ಖೇಡಗಿ ಗ್ರಾ.ಪಂ ಗೆ ಬೀಗ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾ.ಪಂ ದಲ್ಲಿ ಪಿಡಿಒ ಸೇರಿದಂತೆ ಯಾವ ಸಿಬ್ಬಂದಿಯೂ ಇರಲಿಲ್ಲ. ಹೀಗಾಗಿ ಮನವಿ ಸ್ವೀಕರಿಸಲು ಯಾರೂ ಇರದ ಕಾರಣ ಬೀಗ ಹಾಕಿರುವದಾಗಿ ತಿಳಿಸಿದರು. ನೂರಾರು ರೈತರು 6 ಎತ್ತಿನ ಬಂಡಿಯ ಜತೆಗೆ ಬಂದು ಗ್ರಾ,ಪಂ ಎದುರು ಪ್ರತಿಭಟನೆ ನಡೆಸಿದರು.

ADVERTISEMENT

ಸ್ಥಳಕ್ಕೆ ಇ ಒ ಭಿಮಾಶಂಕರ ಕನ್ನೂರ ಭೇಟಿ ನೀಡಿ ಗ್ರಾಮಸ್ಥರಿಗೆ ಜಿ.ಪಂ ಕ್ರಿಯಾ ಯೋಜನೆಯಲ್ಲಿ ಪ್ರತಿ ರಸ್ತೆಗೆ ಎರಡು ಲಕ್ಷ ರೂ ಅನುದಾನ ಇಡುವುದಾಗಿ ಮತ್ತು ಒಂದು ರಸ್ತೆಯ ಕೆಲಸ ನಾಳೆಯೇ ಪ್ರಾರಂಭಿಸುವದಾಗಿ ಮನವರಿಕೆ ಮಾಡಿದರು. ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಧರಣಿ ಹಿಂದೆ ಪಡೆದರು.

ಪ್ರತಿಭಟನೆಯಲ್ಲಿ ಎತ್ತಿನ ಗಾಡಿ ತಂದ ಶಿವಪ್ಪ ಗೋಲಗೇರಿ, ಕೃಷ್ಣಪ್ಪ ಗೋಲಗೇರಿ, ಯಲ್ಲಗೌಡ ಬಿರಾದಾರ, ಸಂಜು ತಳವಾರ, ಮತ್ತು ಪ್ರತಿಭಟನೆಯಲ್ಲಿ ಶಿವಯೋಗಪ್ಪ ಸಾಲೋಟಗಿ, ಸಿದ್ದರಾಮ ಕಳ್ಳಿ, ಬಸು ಬಾರಾಮತಿ, ಸಿದ್ದರಾಯ ಕುಂಬಾರ, ಮಾಳು ಪೀಜಾರಿ, ಸೋಮು ಕುಚನೂರ, ಅಡಿವೆಪ್ಪ ಬಿರಾದಾರ, ರೇವಣಸಿದ್ದ ಬಿರಾದಾರ, ಸಿವಕಪ್ಪ ತಳವಾರ, ಪ್ರಭುಲಿಂಗ ಗೋಳಸಾರ, ಎಲ್ಲುಗೌಡ ಬಿರಾದಾರ ಮತ್ತು ಗ್ರಾಮ ವಿಕಾಸ ಸಂಘದ ಸದಸ್ಯರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.