
ವಿಜಯಪುರ: ತಾಲ್ಲೂಕಿನ ಕತ್ನಳ್ಳಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಪದಾಧಿಕಾರಿಗಳು ಈಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
ಪುರಾತನ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವ ಈ ದೇಗುಲದ ಪರಿಸರವನ್ನು ಸ್ವಚ್ಛವಾಗಿಡುವುದು ಹಾಗೂ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸದಸ್ಯರು ಸೇವೆಯಲ್ಲಿ ಭಾಗವಹಿಸಿದರು.
ಸ್ವಚ್ಛತಾ ಕಾರ್ಯದ ನಂತರ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಸ್ವಚ್ಛ ನೀರಿನಿಂದ ತೊಳೆದು, ಹಾಲಿನಿಂದ ಅಭಿಷೇಕ ಮಾಡಿ, ಭಸ್ಮ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಪ್ರಕಾಶ್ ಆರ್.ಕೆ. ಮಾತನಾಡಿ, ‘ಐತಿಹಾಸಿಕ ದೇವಸ್ಥಾನಗಳು ಕಾಲಕ್ರಮೇಣ ಜೀರ್ಣೋದ್ಧಾರ ಆಗಬೇಕಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಹಾಗೂ ಯುವಪೀಳಿಗೆಯಲ್ಲಿ ಸಂಸ್ಕೃತಿ ಸಂರಕ್ಷಣೆ ಜಾಗೃತಿ ಮೂಡಬೇಕು’ ಎಂದರು.
ಬಾಹುಬಲಿ, ಮಹೇಶ್ ಕುಂಬಾರ್, ರವಿ, ಸಚಿನ್, ವಿಠ್ಠಲ್, ವೀರೇಶ್, ಸಂತೋಷ್, ವಿಕಾಸ್, ರಾಜು, ಸಾಗರ್, ವಾಸು, ಪ್ರದೀಪ್, ಸಂದೀಪ್, ಮಂಜುನಾಥ್, ಅಜಿತ್, ನಿಖಿಲ್, ದೇವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.