ADVERTISEMENT

ಮಶಾಕ ಬಳಗಾರಗೆ ‘ಸಂಗನಬಸವ ಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:42 IST
Last Updated 7 ಫೆಬ್ರುವರಿ 2026, 2:42 IST
ಮಶಾಕ ಬಳಗಾರ 
ಮಶಾಕ ಬಳಗಾರ    

ಕೊಲ್ಹಾರ: ರೋಣಿಹಾಳ ಸಂಗನಬಸವ ವಿದ್ಯಾವರ್ಧಕ ಸಂಘದಿಂದ ಕೊಡಮಾಡುವ ‘ಸಂಗನಬಸವ ಶ್ರೀ’ ಪ್ರಶಸ್ತಿಗೆ ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಆಯ್ಕೆಯಾಗಿದ್ದಾರೆ.

ಫೆ.9ರಂದು ಸಂಜೆ 5 ಗಂಟೆಗೆ ಸಂಗನಬಸವ ವಿದ್ಯಾವರ್ಧಕ ಸಂಘದ ಸಂಗನಬಸವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ‘ಸಂಗನಬಸವ ಉತ್ಸವ’ ಕಾರ್ಯಕ್ರಮದಲ್ಲಿ ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT