ADVERTISEMENT

ಸಹೋದರನಿಗೆ ಪಿಸ್ತೂಲ್ ಪೂರೈಕೆ ಮಾಡಿದ್ದಕ್ಕೆ ಸಾವರ್ಕರ್‌ ಜೈಲಿಗೆ ಹೋಗಿದ್ರು: ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 14:35 IST
Last Updated 27 ಆಗಸ್ಟ್ 2022, 14:35 IST
   

ವಿಜಯಪುರ: ಸಾವರ್ಕರ್‌ ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕೆ ಅಲ್ಲ. ಬ್ರಿಟಷ್‌ ಕಲೆಕ್ಟರ್ ಕೊಲೆ ಪ್ರಕರಣದಲ್ಲಿ ಸಹೋದರನಿಗೆ ಪಿಸ್ತೂಲ್ ಪೂರೈಕೆ ಮಾಡಿದ ಆರೋಪಕ್ಕೆ ಜೈಲಿಗೆ ಹೋಗಿದ್ದರು ಸಾವರ್ಕರ್‌ ಹೋರಾಟ ಸತ್ಯಾಸತ್ಯತೆ ತಿಳಿಲು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದುಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆಹ್ವಾನ ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸಾವರ್ಕರ್ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಕಾಂಗ್ರೆಸ್ ಕಚೇರಿಗೆ ಫೋಟೊ ಅಂಟಿಸಿದ ಬಿಜೆಪಿಯವರು ಚರ್ಚೆಗೆ ಬಂದರೆ ಸಾವರ್ಕರ್ ಏನಿದ್ದರು? ಏನಿರಲಿಲ್ಲ? ಎಂಬುದರ ಬಗ್ಗೆ ತಿಳಿಸುವುದಾಗಿ ಹೇಳಿದರು.

ಅಂಡಮಾನ್‌ ಜೈಲಿನಲ್ಲಿ ಕೇವಲ ಇವರೊಬ್ಬರೇ ಶಿಕ್ಷಗೆ ಒಳಗಾಗಿರಲಿಲ್ಲ.500ಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ಜೈಲಿನಲ್ಲಿ ಇದ್ದರು. ಅವರಾರು ಬ್ರಿಟಿಷರ ಕ್ಷಮಾಪಣೆ ಕೇಳಲಿಲ್ಲ. ಆದರೆ, ಸಾವರ್ಕರ್‌ ಒಬ್ಬರೇ ಏಳು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ಪತ್ರ ಬರೆದಿದ್ದರು ಎಂದು ತಿಳಿಸಿದರು.

ADVERTISEMENT

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಸೇನೆ ಸೇರದಂತೆ ಸಾವರ್ಕರ್‌ ಜನರನ್ನು ತಡೆದರು. ಹಿಂದೂ ಮಹಾಸಭಾದ ಮೂಲಕ ದೇಶ ವಿಭಜನೆಗೆ ಕಾರಣರಾಗಿದ್ದರು. ಮಹಾತ್ಮಗಾಂಧಿ ಕೊಲೆಗೆ ಸಂಚು ರೂಪಿಸಿದವರುವರೇ ಸಾವರ್ಕರ್ ಆಗಿದ್ದಾರೆ. ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದ ಸಾವರ್ಕರ್ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿದರು.ತಮ್ಮ ಬಗ್ಗೆ ತಾವೇ ಪುಸ್ತಕ ಬರೆದು ಅದರಲ್ಲಿ ‘ವೀರ ಸಾವರ್ಕರ್’ ಎಂದು ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ತಮ್ಮ ವೈಫಲ್ಯ ತಡೆಗಾಗಿ ಸಾವರ್ಕರ್ ಅವರನ್ನು ಮುನ್ನೆಲೆಗೆ ತರುತ್ತಿದ್ದಾರೆ.ಬಿಜೆಪಿ ಕಟ್ಟಿ ಬೆಳೆಸಿದಅಡ್ವಾಣಿ, ವಾಜಪೇಯಿ ಬಿಟ್ಟು ಸಾವರ್ಕರ್ ಹಿಂದೆ ಬಿದ್ದಿದ್ದಾರೆ ಎಂದು ದೂರಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ರಾಜ್ಯ ಬಿಜೆಪಿ ಸರ್ಕಾರವು ನೆಹರು ಹೆಸರು ಕೈಬಿಟ್ಟು ಸಾವರ್ಕರ್ ಪೋಟೊ ಹಾಕಿರುವುದು ಖಂಡನೀಯ ಎಂದರು.

ಗಣಪತಿ ಪೆಂಡಾಲ್‌ಗಳಲ್ಲಿ ಸಾವರ್ಕರ್ ಫೋಟೊ ಇಡುವಂತೆ ಅನೇಕರು ಕರೆ ನೀಡಿದ್ದಾರೆ. ಸಾವರ್ಕರ್‌ ಬದಲು ಬಸವಣ್ಣನ ಫೋಟೊ ಇಟ್ಟು, ಗೌರವಿಸಿ ಎಂದು ಅವರು ಸಲಹೆ ನೀಡಿದರು.

ಡಾ.ರವಿ ಬಿರಾದಾರ, ಆರ್ ಎಸ್ ಎಸ್ ಸಿದ್ದಾಂತ ಮನು ಸಿದ್ದಾಂತವಾಗಿದೆ. ಹೀಗಾಗಿ ಮನು ಸಿದ್ದಾಂತದ ಪ್ರತಿಪಾದಕರಾದ ಸಾವರ್ಕರ್ ಹಿಂದೆ ಬಿಜೆಪಿ, ಆರ್‌ಎಸ್‌ಎಸ್‌ನರು ಬಿದ್ದಿದ್ದಾರೆ.ಮನುವಾದ ಮರು ಸ್ಥಾಪಿಸಲು ಯತ್ನಿಸುತ್ತಿದ್ದಾರೆ ಎಂದರು.

ಮುಖಂಡರಾದವಸಂತ ಹೊನಮೋಡೆ, ಸಾಹೇಬಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.