
ಕೊಲ್ಹಾರ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ. ಪತಂಗಿ ಹೇಳಿದರು.
ಪಟ್ಟಣದ ಡಾ ಎ ಪಿ ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ವಿವಿಧ ಮಾದರಿಗಳನ್ನು ವೀಕ್ಷಿಸಿ ಮಾತನಾಡಿದರು. ಇಂತಹ ವಸ್ತು ಪ್ರದರ್ಶನಗಳು ಬಹಳ ಮುಖ್ಯವಾಗಿವೆ. ಮಕ್ಕಳು ಇದರಿಂದ ಹೆಚ್ಚಿನ ಜ್ಞಾನವನ್ನು ಗಳಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ ಉಸ್ಮಾನ್ ಪಟೇಲ ಮಾತನಾಡಿದರು. ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಸಿ ಅರ್ ಪಿ ಗಳಾದ ಎಸ್ ಎಸ್ ಜಂಗಮಶೆಟ್ಟಿ, ಎಸ್. ಎನ್. ತಡಲಗಿ, ಪ್ರಾಂಶುಪಾಲ ಬಂದನಾ ಬ್ಯಾನರ್ಜಿ, ಆಡಳಿತಾಧಿಕಾರಿ ಕೌಸರ್ ಪಟೇಲ ಉಪಸ್ಥಿತರಿದ್ದರು.
ಈ ವೇಳೆ ಸಲೀಮ್ ಡಾಂಗೆ, ಬಿ ಆರ್ ಹಂಗರಗಿ, ಬೋರಮ್ಮ ಪತಂಗಿ, ಸೌಮ್ಯ ಗಿಡ್ಡಪ್ಪಗೋಳ,ಬಸವರಾಜ ಯಂಡಿಗೇರಿ, ಮಹ್ಮದ ಯೂಸುಫ ಜಮಖಂಡಿ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.