ADVERTISEMENT

ನುಡಿದಂತೆ ನಡೆದ ರಾಜ್ಯ ಸರ್ಕಾರ: ಕಲ್ಲು ದೇಸಾಯಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:32 IST
Last Updated 16 ಜುಲೈ 2025, 5:32 IST
ಕೊಲ್ಹಾರ ಪಟ್ಟಣದಿಂದ ಬೆಂಗಳೂರಿಗೆ ಪ್ರಾರಂಭವಾದ ನೂತನ ಬಸ್‌ ಸಂಚಾರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಲು ದೇಸಾಯಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಕೊಲ್ಹಾರ ಪಟ್ಟಣದಿಂದ ಬೆಂಗಳೂರಿಗೆ ಪ್ರಾರಂಭವಾದ ನೂತನ ಬಸ್‌ ಸಂಚಾರಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಲು ದೇಸಾಯಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ಕೊಲ್ದಾರ: ಶಕ್ತಿ ಯೋಜನೆ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಜಿ.ಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಹಿಳಾ ಪ್ರಯಾಣಿಕರಿಗೆ ಸೋಮವಾರ ಟಿಕೆಟ್ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿ.ಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ನುಡಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ, ಜನರ ಮನದಲ್ಲಿ ಶಾಶ್ವತವಾಗಿ ನೆಲೆನಿಂತಿದೆ. ಕಾಂಗ್ರೆಸ್ ಪಕ್ಷ ಸರ್ವ ಜನರ ಹಿತವನ್ನು ಕಾಪಾಡುತ್ತಿದೆ’ ಎಂದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿ, ‘ಸಿ.ಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ  ಭರವಸೆಗಳನ್ನು ಈಡೇರಿಸಿದ್ದಾರೆ’ ಎಂದರು. 

ADVERTISEMENT

ಕೊಲ್ದಾರ ಪಟ್ಟಣದಿಂದ ಬೆಂಗಳೂರಿಗೆ ಪ್ರಾರಂಭವಾದ ನೂತನ ಬಸ್‌ಗೆ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ್ ಎಸ್. ನಾಯಕಲಮಠ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್
ಮದ್ದಿನ್, ಪ.ಪಂ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಪ.ಪಂ ಸದಸ್ಯರಾದ ಶ್ರೀಶೈಲ ಮುಳವಾಡ, ತೌಸಿಪ್ ಗಿರಗಾವಿ, ದಸ್ತಗೀರ ಕಲಾದಗಿ, ಪ್ರಮುಖರಾದ ಖಾಜಾಮೀನ ಪಕಾಲಿ, ಎಂ.ಆರ್ ಕಲಾದಗಿ, ಗೈಬು ಕಂಕರಪೀರ, ಅನ್ವರ ಕಂಕರಪೀರ, ಕಮಲಾಬಾಯಿ ಮಾಕಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.