
ವಿಜಯಪುರ: ಆಧುನಿಕತೆ ಬೆಳದಂತೆ ಮೊಬೈಲ್, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗ್ರಾಮೀಣ ಜಾನಪದ ಸಂಸ್ಕೃತಿ, ನೃತ್ಯ, ಯಕ್ಷಗಾನ, ಮಹಾಭಾರತ-ರಾಮಾಯಣದಂತಹ ಕಥಾರೂಪಕಗಳು ಮಾಯವಾಗುತ್ತಿರುವದು ಆತಂಕಕಾರಿ. ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಅದನ್ನು ಅನಾವರಣಗೊಳಿಸಲು ಸಾಂಸ್ಕೃತಿಕ ವೇದಿಕೆಗಳು ಅಗತ್ಯ ಎಂದು ನಿವೃತ್ತ ಪ್ರಾಂಶುಪಾಲೆ ಶಾಂತಾ ಹೆರಕಲ್ ಅಭಿಪ್ರಾಯಪಟ್ಟರು.
ನಗರದ ಎನ್.ಜಿ.ಓ ಕಾಲೋನಿಯಲ್ಲಿರುವ ಆಂಜನೇಯ ದೇವಸ್ಥಾನದ 6ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಟರಾಜ ಡ್ಯಾನ್ಸ್ ಅಕ್ಯಾಡೆಮಿಯ ಸುಮಾರು 60 ಕ್ಕೂ ಹೆಚ್ಚು ಮಕ್ಕಳಿಂದ ನಾಟ್ಯ ಮತ್ತು ಕಿರು ನಾಟಕ ಜರುಗಿದವು.
ಥಾಯ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಪ್ರತೀಕ್ಷಾ, ಸಾಧನಾ ಹಾಗೂ ಮೂರನೇ ಸ್ಥಾನ ಪಡೆದ ಮನಸ್ವಿ ಅವರಿಗೆ ಹಾಗೂ ಪುಣೆಯಲ್ಲಿ ಜರುಗಿದ ಯುನೆಸ್ಕೋ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಾನ್ವೀ, ವೇದಿಕಾ ಇವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಭೀಮರಾಯ ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಶಿವಪ್ಪ ಸಾವಳಗಿ, ಆಶಾ ಬಾಸೂತಕರ, ಶಿವಾನಂದ ಬಿಜ್ಜರಗಿ, ಬಾಬು ಕೋಲಕಾರ, ಆರ್.ಎಸ್.ಹಡಪದ, ಅಪ್ಪು ಬಿರಾದಾರ ಮತ್ತಿತರರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಶನ್
ವಿಜಯಪುರದ ಆಂಜನೇಯ ದೇವಸ್ಥಾನದ 6ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.