
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ರೈತ ಮಹಿಳೆ ಕಮಲಾಬಾಯಿ ದುಂಡಪ್ಪ ಪೂಜಾರಿ (ಅಮರಗೊಂಡ) ಸರ್ವೇ ನಂಬರ್ 667/2 ಪೈಕಿ ಹದಿನಾರು ಎಕರೆ ಜಮೀನ ಪೈಕಿ ಮೂರು ಎಕರೆ ಜಮೀನಿನಲ್ಲಿರುವ ಕಬ್ಬಿಗೆ ಬುಧವಾರ ವಿದ್ಯುತ್ ಶಾರ್ಕಿಟ್ ಆಗಿ ಸುಮಾರು ₹ 6ಲಕ್ಷ ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಈ ಸುದ್ದಿ ತಿಳಿದು ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಹೆಸ್ಕಾಂ ವಲಯ ಅಧಿಕಾರಿ ಬಾಬಾನಗರ ಅವರು ಈ ಹೊಲದಲ್ಲಿ ಎಲ್ಆಂಡ್‌ಟಿ ಲೈನ್ ಹಾದು ಹೋಗಿದ್ದು, ಅದು ಕತ್ತರಿಸಿ ಜಮೀನಿನಲ್ಲಿಒ ಬಿದ್ದು ಬೆಂಕಿ ಹೊತ್ತಿಕೊಂಡು ಮೂರು ಎಕರೆ ಕಬ್ಬು ಸುಟ್ಟು ಹೋಗಿದೆ ಎಂದು ಹೇಳಿದರು.
ತಡವಲಗಾ ಗ್ರಾಮದ ಆಡಳಿತ ಅಧಿಕಾರಿ ಮಂಜುನಾಥ ಗುರುಬಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿ ಪಂಚನಾಮೆ ಮಾಡಿದರು. ಈ ಕುರಿತು ಹೊರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.