ADVERTISEMENT

ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 14:49 IST
Last Updated 24 ಡಿಸೆಂಬರ್ 2023, 14:49 IST
<div class="paragraphs"><p>ಗೋವಿಂದ ಕಾರಜೋಳ</p></div>

ಗೋವಿಂದ ಕಾರಜೋಳ

   

ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್‌ ಬಂದ್ ಮಾಡಿ ಲಂಚ ತಿನ್ನುತ್ತಿದೆ. ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ. ಜನರ ಅಸಮಾಧಾನವನ್ನು ಬೇರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ರಾಜ್ಯ-ರಾಷ್ಟ್ರ ನಾಯಕರೊಂದಿಗೆ ಸೇರಿ ರಾಜ್ಯದ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇನೆ. ಗಾಳಿ ಸುದ್ದಿಗಳನ್ನು ಮಾಧ್ಯಮಗಳು ನಂಬಬಾರದು ಎಂದರು.

ADVERTISEMENT

ನೂತನ ಪದಾಧಿಕಾರಿಗಳ ನೇಮಕ ಅಸಮಾಧಾನ ವಿಚಾರ ಸತ್ಯಕ್ಕೆ ದೂರವಾದದ್ದು, ಯಾರಿಗೆ ಅವಕಾಶ ಸಿಕ್ಕಿಲ್ಲ, ಅವರಿಗೆಲ್ಲಾ ಅಸಮಾದಾನ ಆಗಬಾರದು. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಬೇಕು ಎಂದರು.

ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಡಿಮೆ ಸ್ಥಾನ ಸಾಧ್ಯವೇ ಇಲ್ಲ. ಹೊಸ ತಂಡ ಕಟ್ಟಲಾಗಿದೆ ಹೊಸಬರನ್ನು ಮುಂದೆ ತರುವ ಕೆಲಸ ಹೈಕಮಾಂಡ್ ಮಾಡಿದೆ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾರ್ಯಕರ್ತರು ಕೈ ಜೋಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.