ADVERTISEMENT

ಮಣ್ಣಿನ ಪರೀಕ್ಷೆ ಅಗತ್ಯ: ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:02 IST
Last Updated 28 ಡಿಸೆಂಬರ್ 2025, 5:02 IST
ಕೊಲ್ಹಾರ ಪಟ್ಟಣದಲ್ಲಿ ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ರೈತರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕೊಲ್ಹಾರ ಪಟ್ಟಣದಲ್ಲಿ ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ರೈತರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು   

ಕೊಲ್ಹಾರ: ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕಿನ ರೈತರಿಗಾಗಿ ರೈತರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಲ್ಲನಗೌಡ ಪಾಟೀಲ ಮಾತನಾಡಿ, ‘ಇಂದಿನ ರೈತರು ಹೆಚ್ಚು ಇಳುವರಿ ಪಡೆಯಲು ಹೆಚ್ಚು ಯುರಿಯಾ ಗೊಬ್ಬರ ಬಳಸಿ ಭೂಮಿ ಬರಡಾಗಲು ಕಾರಣವಾಗಿದ್ದಾರೆ. ಈ ತರಬೇತಿಯಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿ ಅವಶ್ಯಕತೆ ಇರುವ ಪೋಷಕಾಂಶ ನೀಡಲು ನೈತಿಕ ಬಲ ಬರಲು ಸಹಕಾರಿಯಾಗಿದೆ’ ಎಂದು ಹೇಳಿದರು.

ಕೆ.ಯು.ಗಿಡ್ಡಪ್ಪಗೋಳ ಮಾತನಾಡಿ, ‘ಸಣ್ಣ ಹಿಡುವಳಿ ರೈತರು ಈ ತರಬೇತಿಯಿಂದ ತಾವು ಹೆಚ್ಚು ಇಳುವರಿ ಪಡೆಯುವ ವಿವಿಧ ವಿಧಾನಗಳನ್ನು ಅನುಸರಿಸಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ಹಿರಿಯ ಮಾರಾಟ ಅಧಿಕಾರಿಗಳಾದ ಬಸವರಾಜ ಕೋಳೂರ ಮತ್ತು ಲೋಹಿತ ರಾಠೋಡ ಅವರು ರೈತರಿಗೆ ಮಣ್ಣಿನ ಸಂರಕ್ಷಣೆ ಹಾಗೂ ಹೆಚ್ಚು ಇಳುವರಿ ಪಡೆಯುವ ವಿಧಾನಗಳ ಬಗ್ಗೆ ತರಬೇತಿ ನೀಡಿದರು.

ಹಣಮಂತ ಬೆಳ್ಳುಬ್ಬಿ, ಅರ್ಜುನ್ ಸುಣಗಾರ, ರಮೇಶ ಬಾಲಗೊಂಡ, ಮುರಿಗೆಪ್ಪ ಬೆಳ್ಳುಬ್ಬಿ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಮಾಲೀಕರಾದ ರಾಚಣ್ಣ ಬೆಳ್ಳುಬ್ಬಿ ಮತ್ತು ತಾಲ್ಲೂಕಿನ ನೂರಾರು ರೈತರು ಭಾಗವಹಿಸಿದ್ದರು.

ಕೊಲ್ಹಾರ: ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕಿನ ರೈತರಿಗಾಗಿ ರೈತರ ತರಬೇತಿ ಕಾರ್ಯಕ್ರಮವನ್ನು ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.