ರೈಲು
– ಪ್ರಜಾವಾಣಿ ಚಿತ್ರ
ಸೋಲಾಪುರ: ಪ್ರಯಾಣಿಕರ ಹೆಚ್ಚುವರಿ ಗದ್ದಲವನ್ನು ನಿಯಂತ್ರಿಸಲು ಹೋಳಿ ಹಬ್ಬ ಮತ್ತು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸೋಲಾಪುರ ವಿಭಾಗದಿಂದ ಸಂಚರಿಸುವ ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ವಾರಂತ್ಯ ವಿಶೇಷ ರೈಲುಗಳು:
ರೈಲು ಸಂಖ್ಯೆ 01435 ಸೋಲಾಪುರ–ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ) ವಾರಾಂತ್ಯ ವಿಶೇಷ, ಫೆ. 24ರವರೆಗೆ ಪ್ರತಿ ಮಂಗಳವಾರ ಸಂಚರಿಸುತ್ತಿತ್ತು. ಈಗ ಇದು ಜುಲೈ 14 ರವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 01436 ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ)–ಸೋಲಾಪುರ ವಾರಾಂತ್ಯ ವಿಶೇಷ, ಫೆ. 25ರವರೆಗೆ ಪ್ರತಿ ಬುಧವಾರ ಸಂಚರಿಸುತ್ತಿತ್ತು. ಈಗ ಇದು ಜುಲೈ 15 ರವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 01477 ಸೋಲಾಪುರ–ಅನಕಾಪಲ್ಲೆ ವಾರಾಂತ್ಯ ವಿಶೇಷ, ಫೆ. 27 ರವರೆಗೆ ಸಂಚರಿಸುತ್ತಿತ್ತು. ಈಗ ಇದು ಪ್ರತಿ ಶುಕ್ರವಾರ ಜುಲೈ 10ವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 01478 ಅನಕಾಪಲ್ಲೆ–ಸೋಲಾಪುರ ವಾರಾಂತ್ಯ ವಿಶೇಷ, ಫೆ. 27ರವರೆಗೆ ಸಂಚರಿಸುತ್ತಿತ್ತು. ಈಗ ಇದು ಪ್ರತಿ ಶನಿವಾರ ಜುಲೈ 11ರವರೆಗೆ ಸಂಚರಿಸಲಿದೆ.
ದೈನಂದಿನ ವಿಶೇಷ ರೈಲುಗಳು
ಫೆ. 28ರಿಂದ ಸಂಚರಿಸಲು ಅಧಿಸೂಚಿತಗೊಂಡಿದ್ದ ಕೆಳಗಿನ ದೈನಂದಿನ ವಿಶೇಷ ರೈಲುಗಳನ್ನು ಜುಲೈ 15 ರವರೆಗೆ ಮುಂದುವರಿಸಲಾಗಿದೆ:
ರೈಲು ಸಂಖ್ಯೆ 01461/01462 ಸೋಲಾಪುರ–ದೌಂಡ್ ಅನಾರಕ್ಷಿತ ದೈನಂದಿನ ವಿಶೇಷ
ರೈಲು ಸಂಖ್ಯೆ 01465/01466 ಸೋಲಾಪುರ–ಕಲಬುರಗಿ ಅನಾರಕ್ಷಿತ ದೈನಂದಿನ ವಿಶೇಷ.
ಮೇಲಿನ ರೈಲುಗಳ ಸಮಯ, ರಚನೆ ಮತ್ತು ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಧ್ಯ ರೈಲ್ವೆಯ ಸಫಲಾಪುರ ವಿಭಾಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.