ADVERTISEMENT

ಶಮಿ ವೃಕ್ಷಕ್ಕೆ ಮಹಿಳೆಯರ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:36 IST
Last Updated 27 ಅಕ್ಟೋಬರ್ 2020, 3:36 IST
ದೇವರ ಹಿಪ್ಪರಗಿಯಲ್ಲಿ ವಿಜಯದಶಮಿ ದಿನದಂದು ಬನ್ನಿ ಮಹಾಕಾಳಿ (ಶಮಿ ವೃಕ್ಷ) ಪೂಜಾ ವೃತ ಕೈಗೊಂಡ ಮಹಿಳೆಯರು ವೃಕ್ಷಕ್ಕೆ ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು
ದೇವರ ಹಿಪ್ಪರಗಿಯಲ್ಲಿ ವಿಜಯದಶಮಿ ದಿನದಂದು ಬನ್ನಿ ಮಹಾಕಾಳಿ (ಶಮಿ ವೃಕ್ಷ) ಪೂಜಾ ವೃತ ಕೈಗೊಂಡ ಮಹಿಳೆಯರು ವೃಕ್ಷಕ್ಕೆ ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು   

ದೇವರ ಹಿಪ್ಪರಗಿ: ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಆಚರಿಸಿದ ಬನ್ನಿ ಮಹಾಕಾಳಿ ವೃಕ್ಷ ಪೂಜಾ ವೃತವನ್ನು ಮಹಿಳೆಯರು ಸೋಮವಾರ ವಿಜಯದಶಮಿಯಂದು ಪೂಜೆ ಸಲ್ಲಿಸಿ ಸಂಪನ್ನಗೊಳಿಸಿದರು.

ಸತತ 9 ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೆಯ ದಿನದಂದು ವೃಕ್ಷಕ್ಕೆ ಸೀರೆ ಉಡಿಸಿ ವಿಶೇಷ ಪೂಜೆ ಮಾಡಿ, ನೈವಿಧ್ಯ ನೀಡಿ ನಂತರ ವೃತ ಕೈಗೊಂಡ ಎಲ್ಲ ಮಹಿಳೆಯರಿಗೆ ಉಡಿ ತುಂಬುವುದರ ಮೂಲಕ ವೃತ ಸಂಪನ್ನಗೊಳಿಸಿದರು.

ಉಡಿ ತುಂಬುವ ಕಾರ್ಯಕ್ರಮದಲ್ಲಿ ಸುವರ್ಣಾ ನಾಶೀಮಠ, ಗಂಗಾಂಬಿಕಾ ಹಿರೇಮಠ, ಪೂಜಾ ಹಿರೇಮಠ, ಮೀನಾಕ್ಷಿ ಮಸಬಿನಾಳ, ಸರೋಜಾ ಪಾಟೀಲ, ಗಾಯತ್ರಿ ವಡ್ಡೋಡಗಿ, ರೇವತಿ ಬುದ್ನಿ, ಚಿತ್ರಾ ಪಾಟೀಲ, ರೇಖಾ ಪಾಟೀಲ, ದಾನಮ್ಮಾ ಹೂಗಾರ, ಮಂಜುಳಾ ಮಣೂರ, ಕಸ್ತೂರಿ ವಡ್ಡೋಡಗಿ, ರೇಣುಕಾ ತುಂಬಗಿ, ರೇಣುಕಾ ದಾನಗೊಂಡ , ನೀಲಮ್ಮಾ ಯಾಳಗಿ, ಪಾರ್ವತಿ ಇಂಡಿ, ಗೀತಾ ಇಂಡಿ, ಮಂಜುಳಾ ಬಬಲೇಶ್ವರ, ಸಾಧನಾ ಬಬಲೇಶ್ವರ, ಜ್ಯೋತಿ ಮೂಲಿಮನಿ, ಅಶ್ವಿನಿ ಕೋರಿ, ಸಂಗೀತಾ ಬಿರಾದಾರ, ರೇಣುಕಾ ಪ್ಯಾಟಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.