ADVERTISEMENT

ಸಿಂದಗಿ: 24 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 15:14 IST
Last Updated 24 ಮಾರ್ಚ್ 2024, 15:14 IST
ಸಿಂದಗಿ ಪಟ್ಟಣದ ಅಂಜುಮನ್ ಪಿಯು ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬಿಇಒ ಆರೀಫ್ ಬಿರಾದಾರ ಸಿಸಿಟಿವಿ ವೆಬ್ ಕ್ಯಾಮೆರಾ ಪರಿಶೀಲಿಸಿದರು
ಸಿಂದಗಿ ಪಟ್ಟಣದ ಅಂಜುಮನ್ ಪಿಯು ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬಿಇಒ ಆರೀಫ್ ಬಿರಾದಾರ ಸಿಸಿಟಿವಿ ವೆಬ್ ಕ್ಯಾಮೆರಾ ಪರಿಶೀಲಿಸಿದರು   

ಸಿಂದಗಿ: ‘ಸಿಂದಗಿ ಶೈಕ್ಷಣಿಕ ವ್ಯಾಪ್ತಿಗೊಳಪಡುವ ಸಿಂದಗಿ, ದೇವರಹಿಪ್ಪರಗಿ, ಆಲಮೇಲ ಮತ್ತು ತಾಳಿಕೋಟೆ ತಾಲ್ಲೂಕುಗಳ 24 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾ ಅಳವಡಿಕೆ ವ್ಯವಸ್ಥಿತವಾಗಿ ಪೂರ್ಣಗೊಂಡಿದೆ’ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದರು.

ಸಿಂದಗಿ ತಾಲ್ಲೂಕಿನ 8, ಆಲಮೇಲ ತಾಲ್ಲೂಕಿನ 6, ದೇವರಹಿಪ್ಪರಗಿ ತಾಲ್ಲೂಕಿನ 7, ತಾಳಿಕೋಟೆ ತಾಲ್ಲೂಕಿನ 3 ಕೇಂದ್ರಗಳಲ್ಲಿ ಒಟ್ಟು 7,353 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಿಂದಗಿ ತಾಲ್ಲೂಕಿನಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಬಿಇಒ ಇವರ ಅಧ್ಯಕ್ಷತೆಯಲ್ಲಿ ಮೂರು ತಾಲ್ಲೂಕುಮಟ್ಟದ ಜಾಗೃತದಳ ತಂಡಗಳಿವೆ.


ಆಲಮೇಲ ತಾಲ್ಲೂಕಿನಲ್ಲಿ ತಹಶೀಲ್ದಾರ್ ಮತ್ತು ತಾ.ಪಂ ಇಒ ಇವರ ಅಧ್ಯಕ್ಷತೆಯಲ್ಲಿ ಎರಡು ಜಾಗೃತದಳ ತಂಡಗಳು, ದೇವರಹಿಪ್ಪರಗಿಯಲ್ಲಿ ಎರಡು ಮತ್ತು ತಾಳಿಕೋಟೆಯಲ್ಲಿ ಒಂದು ಜಾಗೃತದಳ ತಂಡ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.