ADVERTISEMENT

ಮುದ್ದೇಬಿಹಾಳ: ಅಧ್ಯಯನಕ್ಕೆ ಮಾಹಿತಿ ಸಂಗ್ರಹಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:05 IST
Last Updated 22 ಮೇ 2025, 13:05 IST
ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳಕ್ಕೆ ಈಚೆಗೆ ನದಾಫ/ಪಿಂಜಾರ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ತಂಡದವರಿಗೆ ಮಾಹಿತಿ ಒದಗಿಸುವ ಸಭೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎ.ಕಟಗೂರು ಮಾತನಾಡಿದರು

ಮುದ್ದೇಬಿಹಾಳ: ತಾಲ್ಲೂಕಿನ ಮುದ್ನಾಳ ಗ್ರಾಮಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ತಂಡವೊಂದು ನದಾಫ / ಪಿಂಜಾರ ಕುಲಶಾಸ್ತ್ರ ಅಧ್ಯಯನಕ್ಕೆ ಈಚೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿತು.

ತಂಡದ ನೇತೃತ್ವ ವಹಿಸಿದ್ದ ಅಶೋಕ ಪಾಟೀಲ ಅವರು, ಪಿಂಜಾರರ ಗ್ರಾಮೀಣ ಜೀವನ ಅವರ ಬದುಕಿನ ರೀತಿ ಹಾಗೂ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದರು. ತಂಡದಲ್ಲಿ ಅಶ್ವಿನಿ, ರತ್ನಾಮಾಲಾ, ಕಾರ್ತಿಕ್ ಅವರು ಮಾಹಿತಿ ಸಂಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಕೀಲ ಮುಬಾರಕ ನದಾಫ , ತಾಲ್ಲೂಕು ಉಪಾಧ್ಯಕ್ಷರಾದ ಮಕ್ತುಮಸಾಬ ನದಾಫ್, ಎಚ್.ಐ. ಢವಳಗಿ, ಮುದ್ನಾಳ ಗ್ರಾಮದ ಸಮಾಜದವರು ಪಾಲ್ಗೊಂಡಿದ್ದರು.

ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎ. ಕಟಗೂರ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಾಜದ ಪ್ರಮುಖರಾದ ಚಂದಾಸಾಬ ನದಾಫ್, ತಾಲ್ಲೂಕು ಘಟಕದ ಅಧ್ಯಕ್ಷ ಮಲಿಕಸಾ ನದಾಫ, ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.