
ಸಾಂದರ್ಭಿಕ ಚಿತ್ರ
ತಾಳಿಕೋಟೆ: ಪಟ್ಟಣದಲ್ಲಿ ಕ್ರಿಸ್ತ ಜಯಂತಿಯ ಪ್ರಯುಕ್ತ ಸರ್ವಧರ್ಮ ಸಹಭಾಗಿತ್ವದಲ್ಲಿ ಅಂತರ ಧರ್ಮೀಯ ಸೌಹಾರ್ದ ಕೂಟವನ್ನು ಡಿ.23ರಂದು ಬೆಳಿಗ್ಗೆ 10.00 ಗಂಟೆಗೆ ಪಟ್ಟಣದ ವಿಪಿಎಂ ಮತ್ತು ಸೆಕ್ರೆಡ್ ಹಾರ್ಟ್ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಬಿಜಾಪುರ ಜೆಸ್ವಿಟ್ ಎಜುಕೇಷನಲ್ & ಚಾರಿಟೇಬಲ್ ಸೊಸೈಟಿ, ವಿಜಯಪುರ ವಲಯ ಮುಖ್ಯಸ್ಥ ಸ್ವಾಮಿ ಸುನೀಲ್ ಫೆರ್ನಾಂಡಿಸ್ ಯೇ.ಸ. ವಹಿಸುವರು.
ಸಭೆಯಲ್ಲಿ ಗುಂಡಕನಾಳ ಗಡಿ ಸೊಮನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ , ಮಾಜಿ ಪುರಸಭೆ ಸದಸ್ಯ ಬೌದ್ಧ ಧರ್ಮದ ಮುತ್ತಪ್ಪ ಚಮಲಾಪುರ, ಜೈನ ದಿಗಂಬರ ಪಂಡಿತ ಶೀತಲ್ ಕುಮಾರ್ ಉಪಾದ್ಯೆ, ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ. ಧಮ್ಮೂರ್‌ಮಠ,ಸಿ.ಆರ್.ಪಿ. ರಾಜಸಿಂಗ ವಿಜಯಪುರ, ಬಿ.ಆರ್.ಪಿ ಕಾಶಿನಾಥ ಸಜ್ಜನ, , ಕರುಣಾಮಯ, ಇನ್ ಫ್ರಾ, ಮುದ್ದೆಬಿಹಾಳ್ ಮಾಲೀಕ ಪ್ರಸಾದ್ ಗಟ್ಟಿ, ಉದ್ಯಮಿದಾರ ಶ್ರೀಶೈಲ್ ದೊಡ್ಡಮನಿ ುಪಸ್ಥಿತರಿರುವರು ಎಂದು ಸ್ಥಳೀಯ ಸಂಸ್ಥೆಯ ಸಂಚಾಲಕ ಸ್ವಾಮಿ ಸುನೀಲ್ ಅಂದ್ರಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.