ADVERTISEMENT

ತಾಳಿಕೋಟೆ: ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ: ಪುರಾಣ ಪ್ರಾರಂಭ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:28 IST
Last Updated 3 ಮಾರ್ಚ್ 2026, 2:28 IST
ಹುಚ್ಚೇಶ್ವರ ಸ್ವಾಮೀಜಿ
ಹುಚ್ಚೇಶ್ವರ ಸ್ವಾಮೀಜಿ   

ತಾಳಿಕೋಟೆ: ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಮಾರ್ಚ್ 15ರಂದು ಹೊಳೆ ಹುಚ್ಚೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಜಾತ್ರಾ ಮಹೋತ್ಸವ ಜರುಗಲಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 4ರಿಂದ ನಿತ್ಯ ಸಂಜೆ 7.30ರಿಂದ 9.30ರ ವರೆಗೆ ಹಾನಗಲ್ಲ ಶಿವಕುಮಾರ ಶಿವಯೋಗಿಗಳ ಪುರಾಣ ಪ್ರವಚನವನ್ನು ಹುಚ್ಚೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ನಡೆಸಿಕೊಡಲಿದ್ದು, ಗುಳೇದಗುಡ್ಡ ಹಾಗೂ ಮೈಲೇಶ್ವರ ಮುರುಘಾಮಠದ ಕಾಶೀನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಾರ್ಚ್ 14ರ ರಾತ್ರಿ 9.30ಕ್ಕೆ ಪುರಾಣ ಪ್ರವಚನ ಮಹಾಮಂಗಳಗೊಳ್ಳಲಿದೆ.

ಮಾರ್ಚ್ 15ರಂದು ಬೆಳಿಗ್ಗೆ 6 ಗಂಟೆಗೆ ಹೊಳೆ ಹುಚ್ಚೇಶ್ವರ ಮಹಾಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗುವುದು. ಬೆ. 8.30ಕ್ಕೆ ಪುರಾಣ ಮೆರವಣಿಗೆ ಜೊತೆಗೆ ಪೂರ್ಣಕುಂಭ, ಕಳಸ, ವಾದ್ಯಗಳ ಸಹಿತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.

ADVERTISEMENT

‘ನಂತರ ಕಮತಗಿ, ಕೋಟೇಕಲ್ಲ, ನೀರಲಗಿ ಸಂಸ್ಥಾನಮಠದ ಪೀಠಾಧಿಪತಿ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಹಲವು ಮಠಾಧೀಶರು ಮತ್ತು ಗಣ್ಯರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ನಡೆಯುವುದು. ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಯಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.