ADVERTISEMENT

ಕೊಲ್ಹಾರದ ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವ

ಎತ್ತಿನಬಂಡಿಗಳಲ್ಲಿ ಹಂದರ ತಪ್ಪಲ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 5:08 IST
Last Updated 16 ಫೆಬ್ರುವರಿ 2022, 5:08 IST
ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವದ ಮೊದಲ ದಿನದ ಹಂದರ ತಪ್ಪಲ ಮೆರವಣಿಗೆಯಲ್ಲಿ ದೇವಸ್ಥಾನದ ಉಪಾಸಕ ಸಂಗಪ್ಪ ಬಾಟಿಯವರು ದೇವಿ ಭಾವಚಿತ್ರ ಹೊತ್ತು ಭಾಗವಹಿಸಿದ್ದರು
ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವದ ಮೊದಲ ದಿನದ ಹಂದರ ತಪ್ಪಲ ಮೆರವಣಿಗೆಯಲ್ಲಿ ದೇವಸ್ಥಾನದ ಉಪಾಸಕ ಸಂಗಪ್ಪ ಬಾಟಿಯವರು ದೇವಿ ಭಾವಚಿತ್ರ ಹೊತ್ತು ಭಾಗವಹಿಸಿದ್ದರು   

ಕೊಲ್ಹಾರ: ಕೊಲ್ಹಾರ ಪಟ್ಡಣದಲ್ಲಿ ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವ ಅಂಗವಾಗಿ ಮೊದಲ ದಿನ ಭಕ್ತರು ತಮ್ಮ ಎಂಬತ್ತಕ್ಕೂ ಹೆಚ್ಚಿನ ಎತ್ತಿನ ಬಂಡಿಗಳಲ್ಲಿ ದೇವಸ್ಥಾನಕ್ಕೆ ಹಂದರ ತಪ್ಪಲುಗಳನ್ನು ತಂದು ಸಮರ್ಪಿಸಿದರು.

ದೇವಸ್ಥಾನದ ಉಪಾಸಕ ಸಂಗಪ್ಪ ಬಾಟಿಯವರ ನೇತೃತ್ವದಲ್ಲಿ ಡೊಳ್ಳಿನ ಮೇಳದೊಂದಿಗೆ ಹಂದರ ತಪ್ಪಲಗಳಾದ ತೆಂಗಿನಗರಿ, ನೀರಲ, ಬೋಚಿ, ಬಾಳೆ ತಪ್ಪಲಗಳನ್ನು ಭಕ್ತರು ಊರಿನ ಪ್ರಮುಖ ಬೀದಿಗಳಲ್ಲಿ‌ ಮೆರವಣಿಗೆ ಮುಖಾಂತರ ಸಾಗಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತಂದರು.

ಸಂಜೆ ಅನ್ನಸಂತರ್ಪಣೆ ಹಾಗೂ ರಾತ್ರಿ ಸಂಗಪ್ಪ ಅಂಬಿಗೇರ ಇವರಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ಜರುಗಿತು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮುಖಂಡರಾದ ಹುಚ್ಚಪ್ಪ ಬಾಟಿ, ಪುಂಡಲೀಕ ಬಾಟಿ, ಮಾಜಿ ಪ.ಪಂ ಅಧ್ಯಕ್ಷರುಗಳಾದ ಕಲ್ಲಪ್ಪ ಸೊನ್ನದ, ವಿರೂಪಾಕ್ಷಿ ಕೊಲಕಾರ, ರೈತ ಮುಖಂಡರಾದ ಮಳೆಪ್ಪ ಬರಗಿ, ರಮೇಶ ಬಾಲಗೊಂಡ, ಪರಮಾನಂದ ಬರಗಿ ಹಾಗೂ ಹಲವರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.