ADVERTISEMENT

3000 ಹೆಣ್ಣುಕರುಗಳಿಗೆ ಕಂದು ರೋಗ ಲಸಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:17 IST
Last Updated 31 ಜುಲೈ 2024, 14:17 IST
ಇಂಡಿ ಪಟ್ಟಣದ ಸಾತಪುರದಲ್ಲಿ ಡಾ. ರಾಜಕುಮಾರ ಅಡಕಿ ದನಕರುಗಳಿಗೆ ಲಸಿಕೆ ನೀಡಿದರು
ಇಂಡಿ ಪಟ್ಟಣದ ಸಾತಪುರದಲ್ಲಿ ಡಾ. ರಾಜಕುಮಾರ ಅಡಕಿ ದನಕರುಗಳಿಗೆ ಲಸಿಕೆ ನೀಡಿದರು   

ಇಂಡಿ: ತಾಲ್ಲೂಕಿನಲ್ಲಿ 4 ರಿಂದ 8 ತಿಂಗಳ ಒಳಗೆ ಇರುವ ಆಕಳು ಅಥವಾ ಎಮ್ಮೆ ಕರುಗಳಿಗೆ ಲಸಿಕೆ ಹಾಕುವ ಅಭಿಯಾನ ಆರಂಭಿಸಲಾಗಿದೆ ಎಂದು ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.

ಮಂಗಳವಾರ ಪಟ್ಟಣದ ಪುರಸಭೆ ಆಧೀನದಲ್ಲಿ ಬರುವ ಸಾತಪುರ ಗ್ರಾಮದಲ್ಲಿ ಹೆಣ್ಣು ಕರುವಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘4 ರಿಂದ 8 ತಿಂಗಳ ಕರುಗಳಿಗೆ ಕಂದು ರೋಗ ಬರುತ್ತಿದ್ದು, ಈ ಲಸಿಕೆ ಹಾಕಲಾಗುತ್ತಿದೆ. ಕಂದು ರೋಗ ಬ್ಯಾಕ್ಟಿರಿಯಾ ರೋಗವಾಗಿದ್ದು ಒಂದು ದನದಿಂದ ಇನ್ನೊಂಕ್ಕೆ ಹರಡುತ್ತದೆ. ಹೀಗಾಗಿ ವರ್ಷದಲ್ಲಿ ಒಂದು ಬಾರಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ ಜುಲೈ 21 ರಿಂದ ಹಾಕಲು ಆರಂಭಿಸಿದ್ದು ಅ. 10ರವರೆಗೆ ಒಟ್ಟು 3,000 ಕರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಕರುಗಳಿಗೆ ಜೀವಮಾನದಲ್ಲಿ ಗರ್ಭ ಕಟ್ಟಿದಾಗ ಗರ್ಭಪಾತ ಆಗದಂತೆ ಲಸಿಕೆ ತಡೆಯುತ್ತದೆ’ ಎಂದರು.

ADVERTISEMENT

ಪಟ್ಟಣದ ಪಶು ಆಸ್ಪತ್ರೆ, ತಾಲ್ಲೂಕಿನಲ್ಲಿರುವ ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಅದಲ್ಲದೇ ಪಶು ಆಸ್ಪತ್ರೆ ಸಿಬ್ಬಂದಿ ರೈತರ ಹೊಲಗಳಿಗೆ ಹೋಗಿಯೂ ಲಸಿಕೆ ನೀಡುತ್ತಾರೆ ಎಂದರು.

ಪಶು ವೈದ್ಯಾಧಿಕಾರಿ ಡಾ. ರವಿಶಂಕರ ಬಿರಾದಾರ, ಡಾ. ವಿನಯ ಜಂಬಗಿ, ಎಸ್.ಎಂ. ಮೂಡಲಗೇರಿ, ಜಾವೇದ ಬಾಗವಾನ, ರಾಮಣ್ಣ ಉಪ್ಪಾರ, ರಮೇಶ ನರಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.