ADVERTISEMENT

ವಾರಾಂತ್ಯ ಹೋಟೆಲ್‌ ಬಂದ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 6:57 IST
Last Updated 22 ಏಪ್ರಿಲ್ 2021, 6:57 IST
ಪ್ರದೀಪ್ ಕುಮಾರ್
ಪ್ರದೀಪ್ ಕುಮಾರ್   

ವಿಜಯಪುರ: ‘ವಾರಾಂತ್ಯದ ಎರಡು ದಿನ ಕರ್ಫ್ಯೂ ಘೋಷಣೆ ಮಾಡಿರುವ ಕಾರಣ, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಲಿಕ್ಕೆ ಅವಕಾಶವಿಲ್ಲ. ಏನಿದ್ದರೂ ಪಾರ್ಸಲ್ ತೆಗೆದುಕೊಂಡು ಹೋಗಲಿಕ್ಕೆ ಮಾತ್ರ ಅವಕಾಶವಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಯಾರೂ ವಿನಾಕಾರಣ ಸಂಚಾರ ಮಾಡುವಂತಿಲ್ಲ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ತರಕಾರಿ, ಹಾಲು, ಹಣ್ಣು ಖರೀದಿಗೆ ಮಾತ್ರ ಅವಕಾಶವಿರುತ್ತದೆ. ಪ್ರಯಾಣ ಮಾಡುವವರು, ಮೊದಲೇ ಕಾಯ್ದಿರಿಸಿರುವ ಟಿಕೆಟ್ ಗಳನ್ನು ಪ್ರದರ್ಶನ ಮಾಡಬೇಕಾಗುತ್ತದೆ. ರಾತ್ರಿ ಕರ್ಫ್ಯೂ ವೇಳೆ ವಿನಾಕಾರಣ ಸಂಚಾರ ಮಾಡುವ ದ್ವಿಚಕ್ರ ವಾಹನಗಳೂ ಸೇರಿದಂತೆ ಎಲ್ಲಾ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದನ್ನು ಮಾಡಬೇಕು, ಗುಂಪು ಗುಂಪಾಗಿ ಎಲ್ಲೂ ಸೇರುವಂತಿಲ್ಲ. ಯಾರಾದರೂ ಮೃತಪಟ್ಟರೆ 20 ಮಂದಿ ಮಾತ್ರವೇ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬೇಕು ಎಂದರು.

ಅನುಮತಿಯನ್ನು ಪಡೆದು ಕೊಂಡಿರುವ ಮದುವೆ ಸಮಾರಂಭಗಳಲ್ಲಿ ಕೇವಲ 50 ಮಂದಿ ಮಾತ್ರವೇ ಸೇರಬೇಕು, ಉಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದಂತೆ ಆಯೋಜಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸರ್ಕಾರ ಕೊಡುವಂತಹ ಎಲ್ಲಾ ನಿರ್ದೇಶನಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.