ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿ ಗ್ರಾಮದ ಹತ್ತಿರ ಎರಡು ಬೈಕುಗಳ ನಡುವೆ ಬುಧವಾರ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಗಲಗಲಿಯಿಂದ ನಂದಿ ಸಕ್ಕರೆ ಕಾರ್ಖಾನೆ ಕಡೆಗೆ ಹೊರಟ ಹೊಂಡಾ ಶೈನ್ ಬೈಕ್‌ನಲ್ಲಿ ಹೊರಟ ಗಲಗಲಿ ಗ್ರಾಮದ ನಿವಾಸಿಗಳಾದ ಲಕ್ಷಣ ಮಾದರ, ಕಾಶಿ ಬಾತಿ ಮಾದರ ಹಾಗೂ ನಂದಿ ಸಕ್ಕರೆ ಕಾರ್ಖಾನೆ ಕಡೆಯಿಂದ ಚಿಕ್ಕಗಲಗಲಿ ಕಡೆಗೆ ಪಲ್ಸರ್ ಬೈಕ್‌ನಲ್ಲಿ ಹೊರಟ ಅನೀಲ ಮೇಲಗೇರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಶಿವಪೂಜಯ್ಯ ಹಿರೇಮಠ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.