ADVERTISEMENT

ವಿಜಯಪುರ ಜಿಲ್ಲೆಯ ವಿವಿಧೆಡೆ ಸಿಡಿಲು, ಮಳೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 16:10 IST
Last Updated 26 ಏಪ್ರಿಲ್ 2021, 16:10 IST
ತಿಕೋಟಾ ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಯಿಂದ ಮನೆಯ ಛಾವಣಿ ಹಾರಿಹೋಗಿದೆ
ತಿಕೋಟಾ ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಯಿಂದ ಮನೆಯ ಛಾವಣಿ ಹಾರಿಹೋಗಿದೆ   

ವಿಜಯಪುರ: ನಗರ ಸೇರಿದಂತೆ ಹೊರ್ತಿ, ತಿಕೋಟಾ, ಸಿಂದಗಿ ಹಿಪ್ಪರಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಮತ್ತು ರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ.

ತಿಕೋಟಾ ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಯಿಂದ ಮನೆ ಹಾಗೂ ಚಪ್ಪರ ಧರೆಗುರುಳಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಮನೆಯ ಮಾಲೀಕ ಶ್ರೀಶೈಲ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT