ವಿದ್ಯುತ್ ತಂತಿ ತಗುಲಿ ಸಾವಿಗೀಡಾದ ರೈತ ಸಹೋದರರಾದ ರಾಜು ವಿಜಾಪುರ ಮತ್ತು ಶ್ರೀಕಾಂತ ವಿಜಾಪುರ ಅವರ ಕುಟುಂಬ ಸದಸ್ಯರಿಗೆ ಸಚಿವ ಎಂ.ಬಿ. ಪಾಟೀಲ ಅವರು ಸರ್ಕಾರದ ವತಿಯಿಂದ ತಲಾ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ತಿಕೋಟಾ: ಹೊಲದಲ್ಲಿ ಬೆಳೆಗಳಿಗೆ ನೀರುಣಿಸಲು ತೆರಳಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವಿಗೀಡಾದ ಇಬ್ಬರು ಸಹೋದರರ ಕುಟುಂಬಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸರಕಾರದ ವತಿಯಿಂದ ತಲಾ ₹ 5 ಲಕ್ಷ ಪರಿಹಾರದ ಚೆಕ್ ಸೋಮವಾರ ವಿತರಿಸಿದ್ದಾರೆ.
ತಿಕೋಟಾ ತಾಲ್ಲೂಕಿನ ಬಾಬಾನಗರದ ರೈತ ಕುಟುಂಬದ ರೈತ ಸಹೋದರರಾದ ರಾಜು ವಿಜಾಪುರ ಮತ್ತು ಶ್ರೀಕಾಂತ ವಿಜಾಪುರ ಅವರು ಕಳೆದ ವರ್ಷ ತಮ್ಮ ಹೊಲದಲ್ಲಿ ಬೆಳೆಗಳಿಗೆ ನೀರುಣಿಸಲು ಹೋಗಿದ್ದಾಗ ಅಚಾನಕ್ ಆಗಿ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದರು. ಈ ಘಟನೆಯ ಬಳಿಕ ಸಚಿವರು ಕೂಡಲೇ ಅವರ ಮನೆಗೆ ತೆರಳಿ, ದುಃಖದಲ್ಲಿದ್ದ ಕುಟುಂಬಸ್ಥರನ್ನು ಭೇಟಿಮಾಡಿ ಸಾಂತ್ವನ ಹೇಳಿ, ಸರಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ್ದರು.
ಆ ಭರವಸೆಯಂತೆ ಸಚಿವರು ಇಂದು ಸೋಮವಾರ ಮೃತ ಸಹೋದರರ ಮನೆಗೆ ತೆರಳಿದ ಸಚಿವರು ವಿಜಾಪುರ ಸಹೋದರರ ಕುಟುಂಬ ಸದಸ್ಯರಾದ ಕುಸುಮಾ ರಾಜಕುಮಾರ ವಿಜಾಪುರ ಮತ್ತು ರೇಖಾ ಶ್ರೀಕಾಂತ ವಿಜಾಪುರ ಅವರಿಗೆ ಸರಕಾರದ ವತಿಯಿಂದ ಎರಡೂ ಕುಟುಂಬಕ್ಕೂ ತಲಾ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ದುಂಡಪ್ಪ ವಿಜಾಪುರ, ಈರನಗೌಡ ರುದ್ರಗೌಡರ, ಸಿದಗೊಂಡ ರುದ್ರಗೌಡರ, ಸುಭಾಸ್ ಅಕ್ಕಿ, ಜೊತೇಂದ್ರ ಆಯತವಾಡ, ಯಲ್ಲಾಲಿಂಗ ಹೊನವಾಡ, ಕಾಶಿರಾಯ ಡೆಂಗನವರ, ಹಣಮಂತ್ ಪೂಜಾರಿ, ಯೆಲ್ಲಪ್ಪ ಹೊನಕಟ್ಟಿ, ಸಂತೋಷ ಹೊನವಾಡ, ಅಹ್ಮದ್ ಅಲಿ ಮಕಂದರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.