ADVERTISEMENT

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ತಿಕೋಟಾ ತಾಲ್ಲೂಕು ಮೊದಲು: ಸಿದ್ದನಗೌಡ ದಾಶ್ಯಾಳ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:27 IST
Last Updated 20 ಆಗಸ್ಟ್ 2025, 6:27 IST
ತಿಕೋಟಾ ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕ ಅಧ್ಯಕ್ಷ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ ಮಾತನಾಡಿದರು
ತಿಕೋಟಾ ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕ ಅಧ್ಯಕ್ಷ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ ಮಾತನಾಡಿದರು   

ತಿಕೋಟಾ: ‘ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತಿಕೋಟಾ ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ ಹೇಳಿದರು.

ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಬೇರೆ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆಗಳನ್ನು ಅನುಸರಿಸುತ್ತಿದ್ದಾರೆ. ಶಕ್ತಿ ಯೋಜನೆ ಮೂಲಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆ ಮಾಡಿದೆ’ ಎಂದರು.

ADVERTISEMENT

‘ಬಬಲೇಶ್ವರ ಮತಕ್ಷೇತ್ರವನ್ನು ದೇಶದಲ್ಲೇ ಮಾದರಿಯಾಗಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ.ಬಿ. ಪಾಟೀಲ ಅವರು ನೀರಾವರಿ ಸೌಲಭ್ಯ, ಸ್ವಚ್ಛ ಪರಿಸರ ನಿರ್ಮಾಣ ಮತ್ತು ಉದ್ಯೋಗಿಕ ಕ್ರಾಂತಿಗೆ ಒತ್ತು ನೀಡಿದರು’ ಎಂದು ಹೇಳಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾ ಸುರೇಶ ಪವಾರ, ತಾಲ್ಲೂಕು ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಸಮಿತಿ ಸದಸ್ಯ ಗಂಗೂಬಾಯಿ ಮಡದಾನ, ಮುತ್ತು ಹಿರೇಮಠ, ದಿಲೀಪ ತಳವಾರ, ಶಿವಾನಂದ ಹಂಜಗಿ, ಗೈಬಿಲಾಲ ಮುಜಾವರ, ಪಿಡಿಒ ಸದಾಶಿವ ಭೂಯಿನ, ರೀತಾ ಮೌರ್ಯ, ಜೆ.ಎಸ್. ಬಿರಾದಾರ, ಕೆ.ಜಿ. ಭೋಸಲೆ, ಎಸ್.ಎಲ್. ಚವ್ಹಾಣ ಇದ್ದರು.

ತಿಕೋಟಾ ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜರುಗಿದ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕಧ್ಯಕ್ಷ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.