ವಿಜಯಪುರ: ನಗರ ಹೊರವಲಯದ ತೊರವಿ ಲಕ್ಷ್ಮೀ ನರಸಿಂಹ ದೇವರ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಮೇ 10ರ ಬೆಳಿಗ್ಗೆ 8ಕ್ಕೆ ಮನ್ಯುಸೂಕ್ತ ಹೋಮ, ಮಧ್ಯಾಹ್ನ ಮಹಾಪೂಜೆ ನೈವೇದ್ಯ, ತೀರ್ಥ ಪ್ರಸಾದ, ಸಂಜೆ 6ಕ್ಕೆ ಪಂ.ಸಂಜೀವಾಚಾರ್ಯ ಬುರ್ಲಿ ಅವರಿಂದ ಪ್ರವಚನ, 11ರಂದು ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ತೀರ್ಥ ಪ್ರಸಾದ, ಸಂಜೆ 6ಕ್ಕೆ ಪಂ.ಕೃಷ್ಟಾಚಾರ್ಯ ಜೋಶಿ ಅವರಿಂದ ಪ್ರವಚನ, 12 ರಂದು ಬೆಳಿಗ್ಗೆ 9ಕ್ಕೆ ಪವಮಾನ ಹೋಮ, ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ತೀರ್ಥ ಪ್ರಸಾದ, 6ಕ್ಕೆ ಪಂ.ಪ್ರದ್ಯುಮ್ನಾಚಾರ್ಯ ಅವರಿಂದ ಪ್ರವಚನ ನಡೆಯಲಿವೆ.
13ರ ಬೆಳಿಗ್ಗೆ 7ಕ್ಕೆ ಸರ್ವಮೂಲ ಗ್ರಂಥ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ತೀರ್ಥ ಪ್ರಸಾದ, ಸಂಜೆ 6ಕ್ಕೆ ಪಂ.ವೇದನಿಧಿ ಆಚಾರ್ಯ ಅವರಿಂದ ಪ್ರವಚನ, 14ರ ಬೆಳಿಗ್ಗೆ ಸರ್ವಮೂಲ ಗ್ರಂಥ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ತೀರ್ಥ ಪ್ರಸಾದ, ಸಂಜೆ 6ಕ್ಕೆ ಪಂ.ಅಜಿತಾಚಾರ್ಯ ಹನಗಂಡಿ ಇವರಿಂದ ಪ್ರವಚನ, 15ರ ಬೆಳಿಗ್ಗೆ ಮಂತ್ರ ಪರೀಕ್ಷೆ, ಸಂಗೀತ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ 10ಕ್ಕೆ ಪಂ.ಕೃಷ್ಟಾಚಾರ್ಯ ಜೋಶಿ ಕಾಖಂಡಕಿ ಇವರಿಂದ ಪ್ರವಚನ, ಜಾಗರಣೆ, ಹರಿವಾಣೋತ್ಸವ ನಡೆಯಲಿದೆ.
16ರ ಬೆಳಿಗ್ಗೆ ಮಹಾಪೂಜೆ, ನೈವೇದ್ಯ, ತೀರ್ಥಪ್ರಸಾದ, ಮಧ್ಯಾಹ್ನ 1ಕ್ಕೆ ವಸಂತ ಪೂಜೆ, ಸಂಜೆ 6ಕ್ಕೆ ಪಂ.ಆನಂದಾಚಾರ್ಯ ದಿವಾಣಜಿ ಅವರಿಂದ ಪ್ರವಚನ, 17ರ ಬೆಳಿಗ್ಗೆ ನರಸಿಂಹ ಜಯಂತಿ ಆಚರಣೆ, ಸರ್ವಮೂಲ ಗ್ರಂಥ ಪಾರಾಯಣ, ನರಸಿಂಹ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ 4ಕ್ಕೆ ಪಂ.ನರಹರಿ ಆಚಾರ್ಯ ಜೋಶಿ ಅವರಿಂದ ಪ್ರವಚನ, 6.50ಕ್ಕೆ ಜನನೋತ್ಸವ, ರಾತ್ರಿ 8ಕ್ಕೆ ತೀರ್ಥಪ್ರಸಾದ, 18ರ ಬೆಳಿಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ, 11ಕ್ಕೆ ಪುರಾಣ ಮಂಗಳ, 12ಕ್ಕೆ ರಥೋತ್ಸವ, ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ತೀರ್ಥ ಪ್ರಸಾದ, ಸಂಜೆ 6ಕ್ಕೆ ಪಂ.ನಿಖಿಲ ಆಚಾರ್ಯ ಪದಕಿ ಅವರಿಂದ ಪ್ರವಚನ, 19ರ ಬೆಳಿಗ್ಗೆ ಸರ್ವಮೂಲ ಗ್ರಂಥ ಪಾರಾಯಣ ಸಮಾಪ್ತಿ, 8.30ಕ್ಕೆ ಗೋಪಾಲ ಕಾವಲಿ, ಮಧ್ಯಾಹ್ನ ಮಹಾಪೂಜೆ, ಪಂಡಿತರ ಸನ್ಮಾನ, ತೀರ್ಥಪ್ರಸಾದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.