ADVERTISEMENT

ಸೋಲಾಪುರ: ದೇವಿ ನವರಾತ್ರಿಗೆ ರಾಜ್ಯ ಉತ್ಸವದ ಮನ್ನಣೆ

ತುಳಜಾಪುರ: ಮೈಸೂರ ದಸರಾ ಮಾದರಿಯಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:35 IST
Last Updated 22 ಸೆಪ್ಟೆಂಬರ್ 2025, 4:35 IST
ತುಳಜಾಪುರದ ಅಂಬಾ ಭವಾನಿ
ತುಳಜಾಪುರದ ಅಂಬಾ ಭವಾನಿ   

ಸೋಲಾಪುರ: ಮಹಾರಾಷ್ಟ್ರದ ಕುಲದೈವ ತುಳಜಾಪುರದ ಅಂಭಾ ಭವಾನಿ ನವರಾತ್ರಿ ಉತ್ಸವ ಸೆ.22ರಿಂದ 10ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೀರ್ತಿ ಕಿರಣ ಪೂಜಾರಿ ತಿಳಿಸಿದರು.

ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ದಸರಾ ಮಹೋತ್ಸವ ಅಂತರರಾಷ್ಟ್ರೀಯ ಮನ್ನಣೆ ‍ಪಡೆದಿದೆ. ಅದೇ ರೀತಿ ರಾಜ್ಯ ಉತ್ಸವವನ್ನು ಆಚರಣೆ ಮಾಡುವ ಮೂಲಕ ದೇಶದಲ್ಲಿಯೇ ಅಂಭಾ ಭವಾನಿ ಉತ್ಸವವನ್ನು ಜನಪ್ರಿಯಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಘಟಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿ ವಿಧಾನ ಆರಂಭವಾಗಲಿದ್ದು, ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ತುಳಜಾಪುರದ ಸೈನಿಕ ವಿದ್ಯಾಲಯದ ಆವರಣದಲ್ಲಿ ರಾಷ್ಟ್ರಮಟ್ಟದ ಕಲಾವಿದರಿಂದ ಸಂಗೀತ, ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇಂಗ್ಲಿಷ್, ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ಉದ್ದೇಶಿಸಲಾಗಿದೆ. ಸುಗಮ ಸಾರಿಗೆ, ಸೂಕ್ತ ರಕ್ಷಣೆಗೆ ಅಗತ್ಯ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಕರ್ನಾಟಕ, ತೆಲಾಂಗಣ, ಆಂಧ್ರ, ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ನಿತ್ಯ 400 ಭಕ್ತರಿಗೆ ಅಭಿಷೇಕಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಶುಲ್ಕ ಏರಿಕೆ: ಅಂಭಾ ಭವಾನಿ ದರ್ಶನಕ್ಕೆ ಶುಲ್ಕ ಸಹಿತ ದರ್ಶನ ₹200 ರಿಂದ ₹300, ವಿಶೇಷ ದರ್ಶನ ಶುಲ್ಕ ₹500-₹1000, ವಿಐಪಿ ರೆಫೆರಲ್ ಶುಲ್ಕ ₹ 200-₹ 500 ಹೆಚ್ಚಿಸಲಾ್ಗಿದೆ.

ವಿಐಪಿ ದರ್ಶನವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಈ ಕುರಿತು ನಡೆದ ಸಭೆಯಲ್ಲಿ ರ್ಚಕರ ಸಂಘದ ಪರವಾಗಿ ವಿಪಿನ್‌ ಶಿಂದೆ ಆಗ್ರಹಿಸಿದರು. ಅಲ್ಲದೆ ದರ್ಶನ ಹೆಚ್ಚಳಕ್ಕೆ ವಿರೋಧ ವ್ಯಕಜ್ತಪಡಿಸಿದರು.

ಆನ್‌ಲೈನ್‌ ಪೂಜೆಗೆ ಅವಕಾಶವಿದ್ದು, ಒಂದು ವಾರದ ಮುಂಚೆ ಹೆಸರು ನಮೂದಿಸಿಕೊಳ್ಳನಬೇಕು. ಹೆಚ್ಚಿನ ಮಾಹಿತಿಗೆ ತುಳಜಾಪುರ ದೇವಸ್ಥಾನದ ಮುಖ್ಯ ಅರ್ಚಕ ಸಂಜಯ್ ಧುಮಾಲ್‌ ಅವರನ್ನು ಸಂಪರ್ಕಿಸಬಹುದು. ಮೊ– 9850029302,9403709239.

ಮೈಸೂರು ದಸರಾ ಮಾದರಿಯಲ್ಲಿ ಮಹಾರಾಷ್ಟ್ರದ ಕುಲದೇವಿ ಭವಾನಿ ನವರಾತ್ರಿ ಉತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ
ಕೀರ್ತಿಕಿರಣ ಪೂಜಾರ, ಜಿಲ್ಲಾಧಿಕಾರಿ

ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮ

22ರಂದು ಬೆಳಿಗ್ಗೆ ದೇವಿಯನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಧ್ಯಾಹ್ನ 12ಕ್ಕೆ ಘಟಸ್ಥಾಪನೆ ರಾತ್ರಿ ಛಬಿನಾ ಉತ್ಸವ ಸ.23ರಿಂದ 25ರವರೆಗೆ ದಿನನಿತ್ಯದ ಪೂಜೆ 26ರಂದು ದೇವಿಯ ಲಲಿತ ಪಂಚಮಿ ರಥ ಅಲಂಕಾರ ಮಹಾಪೂಜೆ 27ರಂದು ದೇವಿಯ ಮುರಳಿ ಅಲಂಕಾರ 28ರಂದು ಶೇಷಶಾಹಿ ಅಲಂಕಾರ 29ರಂದು ಭವಾನಿ ತಲವಾರ ಅಲಂಕಾರ 30ರಂದು ದುರ್ಗಾಷ್ಟಮಿ ಮಹಿಷಾಸುರ ಮರ್ದಿನಿ ಅಲಂಕಾರ ಬೆಳಿಗ್ಗೆ 7ಕ್ಕೆ ಹೋಮ ಹವನ ಮಧ್ಯಾಹ್ನ ಪೂರ್ಣಾಹುತಿ. ಅ.1 ರಂದು ಮಹಾನವಮಿ ದೇವಿಯ ದಿನನಿತ್ಯದ ಪೂಜೆ 12 ಗಂಟೆಗೆ ಹೋಮ ಧಾರ್ಮಿಕ ವಿಧಿ ಅ.2ರಂದು ವಿಜಯದಶಮಿ ಸೀಮೋಲ್ಲಂಘನ ಹಾಗೂ ರಾತ್ರಿ ಪಲ್ಲಕ್ಕಿ ಮೆರವಣಿಗೆ. ಬೆಳಿಗ್ಗೆ ದೇವಿಯ ಸೀಮೋಲ್ಲಂಘನ ಹಾಗೂ ನಿದ್ರೆ ಅ.6 ರಂದು ಕೋಜಾಗಿರಿ ಹುಣ್ಣಿಮೆ ಅ.7ರಂದು ದೇವಸ್ಥಾನದ ಹುಣ್ಣಿಮೆ ಬೆಳಿಗ್ಗೆ ದೇವಿಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ರಾತ್ರಿ ಛಬೀನಾ ಹಾಗೂ ಜೋಗವಾ. ಅ.8ರಂದು ದೇವಿಯ ದಿನನಿತ್ಯದ ಪೂಜೆ ಅನ್ನದಾನ ಮಹಾಪ್ರಸಾದ ರಾತ್ರಿ ಸೋಲಾಪುರದ ಕೋಲುಗಳಿಂದ ಛಬೀನಾ ಉತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.