
ಪ್ರಜಾವಾಣಿ ವಾರ್ತೆ
ಸಿಂದಗಿ (ವಿಜಯಪುರ ಜಿಲ್ಲೆ): ರಾಜ್ಯಮಟ್ಟದ ‘ವಚನ ಸಿರಿ’ ಪ್ರಶಸ್ತಿಗೆ ಧಾರವಾಡದ ಪ್ರಾಧ್ಯಾಪಕಿ ವೀಣಾ ಯಲಿಗಾರ ಮತ್ತು ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಮುದ್ದೇಬಿಹಾಳ ತಾಲ್ಲೂಕು ಕೊಣ್ಣೂರು ಗ್ರಾಮದ ಸಾಹಿತಿ ಬಿ.ಆರ್.ಪೋಲಿಸ ಪಾಟೀಲ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ತಲಾ ₹ 10 ಸಾವಿರ ಒಳಗೊಂಡಿದೆ.
ಸಂಶೋಧಕ ಎಂ.ಎಂ.ಕಲಬುರ್ಗಿ ಹೆಸರಿನಲ್ಲಿ ಅವರ ಕುಟುಂಬದವರು ಸ್ಥಾಪಿಸಿರುವ ಕಲಬುರ್ಗಿ ಫೌಂಡೇಶನ್ ಪ್ರಶಸ್ತಿ ನೀಡುತ್ತಿದೆ. ಫೆ.28ರಂದು ತಾಲ್ಲೂಕಿನ ಸಿದ್ಧಾರೂಢಮಠದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಶಿವಲಿಂಗ ಕಲಬುರ್ಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.