
ತಾಳಿಕೋಟೆ: ತಾಲ್ಲೂಕಿನ ಕಲಕೇರಿ ಗ್ರಾಮದ ಜಗದಾರಾಧ್ಯ ಜಯ ಶಾಂತಲಿಂಗೇಶ್ವರ ಸಂಸ್ಥಾನಮಠ ಜಾಲಹಳ್ಳಿ-ಕಲಕೇರಿಯ ಪೀಠಾಧಿಪತಿ ಗಳಾದ ಶಿವಾಚಾರ್ಯ ರತ್ನ ಜಗದಾರಾಧ್ಯ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 70 ನೇ ವರ್ಷದ ಹುಟ್ಟುಹಬ್ಬದ ವರ್ಧಂತಿ ಮಹೋತ್ಸವ ಹಾಗೂ ಅಭಿನಂದನಾ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದ ಜೆ ಜೆ ಶಿಕ್ಷಣ ಸಂಸ್ಥೆಯ ಆವರಣದ ಮಹಾಮಠದಲ್ಲಿ ಡಿ.17 ಮತ್ತು 18ರಂದು ಜರುಗಲಿವೆ.
ಧಾರ್ಮಿಕ ಕಾರ್ಯಕ್ರಮಗಳ ಸನ್ನಿಧಾನವನ್ನು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯರು ವಹಿಸುವರು. 17 ರಂದು ಬುಧವಾರ ಬೆಳಿಗ್ಗೆ 9.00 ಗಂಟೆಗೆ ಓಂಕಾರ ಧ್ವಜಾರೋಹಣವನ್ನು ಕಲಕೇರಿಯ ಗುರುಮರುಳಾರಾಧ್ಯ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ನೆರವೇರಿಸುವರು. ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಶ್ರೀಗುರು ಮಡಿವಾಳೇಶ್ವರ ಶಿವಾಚಾರ್ಯರು ಅಧ್ಯಕ್ಷತೆಯನ್ನು ವಹಿಸುವರು. ಬೆ.9.30 ಗಂಟೆಗೆ ರಕ್ತದಾನ ಹಾಗೂ ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ಸಂಜೆ 5.30ಕ್ಕೆ ಧರ್ಮಸಭೆ ನಡೆಯುವುದು.
ಡಿ.18 ರಂದು ಗುರುವಾರ ಬೆಳಿಗ್ಗೆ ನೂತನ ವರ್ಷದ ದಿನ ದರ್ಶಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬೆ.10.30 ಗಂಟೆಗೆ ಧರ್ಮ ಸಭೆ ಮತ್ತು ಜಾಲಹಳ್ಳಿ ಶ್ರೀಗಳ ಅಭಿನಂದನಾ ಸಮಾರಂಭ. ಗುರುವಂದನೆ, ತುಲಾಭಾರ ಸೇವೆ ಹಾಗೂ ಜಾಲಹಳ್ಳಿ ಶ್ರೀಗಳ ಭಾಗ್ಯವಿಧಾತಾ ಜೀವನ ಚರಿತ್ರೆ ಗ್ರಂಥ ಲೋಕಾರ್ಪಣೆ ಸಮಾರಂಭನ ಡೆಯಲಿದ್ದು ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು.
ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.