ADVERTISEMENT

ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಅರಿಯಿರಿ: ಮಿರ್ಧೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:23 IST
Last Updated 11 ನವೆಂಬರ್ 2025, 5:23 IST
   

ವಿಜಯಪುರ: ‘ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರಿ. ಬಿಜಾಪುರ ಅದಿಲ್ ಶಾಹಿಗಳ ಕುರುಹುಗಳ, ಸ್ಮಾರಕಗಳು, ಗುಮ್ಮಟಗಳ ಐತಿಹಾಸಿಕ ಪರಪಂಪರೆಯ ನೆಲೆ ಬೀಡಾಗಿದೆ’ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಜುರುಗಿದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಆದಿಲ್ ಶಾಹಿಗಳ ಕಲೆ, ವಾಸ್ತುಶಿಲ್ಪ ಮತ್ತು ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳು ಅರಿತುಕೊಳ್ಳವುದು ಅವಶ್ಯ’ ಎಂದು ಹೇಳಿದರು.

ADVERTISEMENT

ಚಡಚಣದ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಅಪ್ಪು ಜಾಧವ ಮಾತನಾಡಿ, ‘ವಿಜಯಪುರ ನಗರದ ಸುತ್ತೆಲ್ಲ ಬಿಜಾಪುರ ಆದಿಲ್ ಶಾಹಿಗಳ ಭವ್ಯ ಸ್ಮಾರಕಗಳು, ಕೋಟೆ, ಗೋಡೆಗಳು ಇಲ್ಲಿವೆ. ಇಸ್ಲಾಮಿಕ್ ಶೈಲಿಯ ಸ್ಮಾರಕಗಳಿವೆ. ಇವುಗಳ ವಿಶೇಷತೆ ತಿಳಿದುಕೊಳ್ಳುವುದು ಅವಶ್ಯ’ ಎಂದರು.

‘ನಗರದ ವಿವಿಧೆಡೆ, ಗುಮ್ಮಟಗಳು, ಬಾಗಿದ ಮಿನಾರುಗಳು, ಕಮಾನುಗಳು, ಬೃಹತ್ ಇಬ್ರಾಹಿಂ ರೋಜಾ, ಗೋಳಗುಮ್ಮಟ, ಜುಮ್ಮಾ ಮಸೀದಿಯಂತಹ  ಹಲವಾರು ಕಟ್ಟಡಗಳ ಮೂಲಕ ಬಿಜಾಪುರ ಆದಿಲ್ ಶಾಹಿಗಳ ಕಲೆ ಮತ್ತು ವಾಸ್ತುಶಿಲ್ಪವನ್ನು ನಾವು ಗಮನಿಸಬಹುದು’ ಎಂದು ಹೇಳಿದರು.

ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಐ.ಎಸ್.ಹೂಗಾರ, ಭೀಮಶಿ ಮದರಖಂಡಿ, ಅಮೋಘಿ ಯಂಕವಗೋಳ, ಭಾರತಿ ಕಾರಕಲ್, ಮಲಿಕ್ ಜಮಾದಾರ್, ಡಾ. ಆರ್.ಜಿ.‌ ಕಮತರ್, ಶರಣಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.