ADVERTISEMENT

ವಿಜಯಪುರ: ಬೆಳೆ ಸಮೀಕ್ಷೆದಾರರ ಪರ ಧ್ವನಿ ಎತ್ತಲು ಮನವಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 5:06 IST
Last Updated 20 ನವೆಂಬರ್ 2025, 5:06 IST
ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿ ವಿಜಯಪುರ ಬೆಳೆ ಸಮೀಕ್ಷೆದಾರರ ಸಂಘದಿಂದ ಶಾಸಕ ವಿಠ್ಠಲ ಕಟಕಧೋಂಡ ಅವರಿಗೆ ಮನವಿ ಸಲ್ಲಿಸಲಾಯಿತು 
ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿ ವಿಜಯಪುರ ಬೆಳೆ ಸಮೀಕ್ಷೆದಾರರ ಸಂಘದಿಂದ ಶಾಸಕ ವಿಠ್ಠಲ ಕಟಕಧೋಂಡ ಅವರಿಗೆ ಮನವಿ ಸಲ್ಲಿಸಲಾಯಿತು    

ವಿಜಯಪುರ: ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡರಿಗೆ ಬೆಳೆ ಸಮೀಕ್ಷೆದಾರರ ಸಂಟನೆಯ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.

ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷ ತಸ್ತಿಕ ಅಹ್ಮದ್ ಕಂದಗಲ್ಲ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಯಾವುದೇ ಸರ್ಕಾರದ ಸಹಾಯವಿಲ್ಲದೆ ಅನೇಕ ಅಪಾಯಕಾರಿ ಸನ್ನಿವೇಶದಲ್ಲಿ ಬೆಳೆ ಸಮೀಕ್ಷೆದಾರರು ಕೆಲಸ ನಿರ್ವಹಿಸುತ್ತಿದ್ದು, ನಮ್ಮನ್ನೇ ನಂಬಿರುವ ಸಂಸಾರಗಳು ಬೀದಿಗೆ ಬೀಳುವ ಸಂಭವವಿದೆ. ಆದ್ದರಿಂದ ಸರ್ಕಾರ ನಮ್ಮನ್ನು ಕಾಯಂಗೊಳಿಸಿ, ವಿಮೆ ನೀಡುವುದರೊಂದಿಗೆ ಅವಶ್ಯಕತೆ ಇರುವ ಮೂಲ ಸೌಕರ್ಯ ನೀಡಬೇಕು ಎಂದು ಮನವಿ ಮಾಡಿದರು.

ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕ ಕಟಕಧೋಂಡ, ಬೆಳೆ ಸಮೀಕ್ಷೆದಾರರನ್ನು ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡುವಂತೆ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಿ, ಚರ್ಚಿಸುವುದಾಗಿ ಭರವಸೆ ನೀಡಿದರು.

ADVERTISEMENT

ಜಿಲ್ಲಾ ಅಧ್ಯಕ್ಷ ನರಸಪ್ಪ ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಪ್ಪ ತಳವಾರ, ಅಜಯ್ ಹಿರೇಮಠ, ಸುರೇಶ್ ಜಕಾತಿ, ಪ್ರೇಮ್ ಪವಾರ, ಸದಾಶಿವ ಚಲವಾದಿ, ಪಿಂಟು ಚವ್ಹಾಣ ಇದ್ದರು.

ಫೋಟೋ ಕ್ಯಾಪ್ಶನ್

ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಲು ಬೆಳೆ ಸಮೀಕ್ಷೆದಾರರ ಸಂಘದಿಂದ ಶಾಸಕ ವಿಠ್ಠಲ ಕಟಕಧೊಂಡರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.