ADVERTISEMENT

ತಾಳಿಕೋಟೆ | ಅಂಬಲೇಶ್ವರ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:41 IST
Last Updated 17 ಸೆಪ್ಟೆಂಬರ್ 2024, 15:41 IST

ತಾಳಿಕೋಟೆ: ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಅಂಬಲೇಶ್ವರ ಜಾತ್ರಾ ಮಹೋತ್ಸವ ಬುಧವಾರ ನಡೆಯಲಿದ್ದು, ತನ್ನಿಮಿತ್ತ ಮಂಗಳವಾರ ಸಂಜೆ ಪ್ರವಚನ ಹಾಗೂ ಧರ್ಮಸಭೆ ನಡೆಯಿತು.

ಚಿಕ್ಕಲಗಿ ಕ್ರಾಸ್ ತಪೋವನದ ಶಿವಾನಂದಶ್ರೀ ಸಾನ್ನಿಧ್ಯ ವಹಿಸುವರು. ಕೋರವಾರ ಚೌಕಿಮಠದ ಅಭಿನವ ಮುರುಗೇಂದ್ರ ಶ್ರೀ ನೇತೃತ್ವ ವಹಿಸುವರು.

ರಾತ್ರಿಯಿಂದ ಬೆಳಗಿನವರೆಗೆ ಶಿವಭಜನಾ ಕಾರ್ಯಕ್ರಮದಲ್ಲಿ ಗ್ರಾಮದ ಅಂಲೇಶ್ವರ ಭಜನಾ ಮಂಡಳಿ, ಬಸವನ ಬಾಗೇವಾಡಿ ತಾಲ್ಲೂಕಿನ ದೇಗಿನಾಳ ಗ್ರಾಮದ ಮಾರುತೇಶ್ವರ ಭಜನಾ ಮಂಡಳಿ, ಸಂಕನಾಳದ ಬಾಬಾಸಾಹೇಬ ಅಂಬೇಡ್ಕರ್ ಭಜನಾ ಮಂಡಳಿ, ಹುಲ್ಲೂರ ಭಜನಾ ಮಂಡಳಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಭಜನಾ ತಂಡಗಳು ಭಾಗವಹಿಸಿದ್ದವು.

ADVERTISEMENT

ಸೆ. 18ರಂದು ಬೆಳಿಗ್ಗೆ 6.30ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಕೋಲಾಟ ಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಮಹಾಪ್ರಸಾದ, ಮಧ್ಯಾಹ್ನ 2ಕ್ಕೆ ಜೋಳದ ಚೀಲ ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ನಡೆಯಲಿವೆ.

ಸಂಜೆ 5ಕ್ಕೆ ಮಹಾರಥೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.