ADVERTISEMENT

ವಿಜಯಪುರ: ತಾಯಿ, ಪತ್ನಿ ಹತ್ಯೆ; ಅಪರಾಧಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:11 IST
Last Updated 6 ನವೆಂಬರ್ 2025, 6:11 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ವಿಜಯಪುರ: ಆಸ್ತಿ ವಿಚಾರವಾಗಿ ತಾಯಿ ಹಾಗೂ ಪತ್ನಿಯನ್ನು ರೈಲಿನಿಂದ ಹೊರ ತಳ್ಳಿ ಹತ್ಯೆ ಮಾಡಿದ ಆರೋಪಿಗೆ ವಿಜಯಪುರ ಒಂದನೇ ಹೆಚ್ಚವರಿ ಜಿಲ್ಲಾ ಹಾಗೂ ಸೆಷನ್ಸ್‌ ಕೋರ್ಟ್‌ ಕಠಿಣ ಜೀವಾವಧಿ ಶಿಕ್ಷೆ ಹಾಗೂ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಚನ್ನಮಲ್ಲಪ್ಪ ಎಂಬಾತನಿಗೆ ಶಿಕ್ಷೆಯಾಗಿದೆ. ಆಸ್ತಿ ವಿಚಾರ, ಕುಡಿತ ಹಾಗೂ ಜೂಜಾಟ ಆಡಬೇಡ ಎಂದು ತಾಯಿ ನಾಗಮ್ಮ ಹಾಗೂ ಪತ್ನಿ ಕವಿತಾ ಬುದ್ದಿವಾದ ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಗದಗ ಹಾಗೂ ವಿಜಯಪುರ ಹೋಗುವ ರೈಲಿನಲ್ಲಿ ಪ್ರಯಾಣ ಮಾಡುವಾಗ ಪತ್ನಿಯನ್ನು ರೈಲಿನಿಂದ ಹೊರ ತಳ್ಳಿದ್ದಾನೆ. ಅದನ್ನು ನೋಡಿದ ತಾಯಿ ನಾಗಮ್ಮ ಕಿರುಚಾಡಿದಾಗ ಎಲ್ಲರಿಗೂ ವಿಷಯ ಗೊತ್ತಾಗುತ್ತದೆ ಎಂದು ಅವಳನ್ನು ಹೊರ ತಳ್ಳಿ ಹತ್ಯೆ ಮಾಡಿದ್ದಾನೆ.

ADVERTISEMENT

ಯಾರಿಗೂ ಅನುಮಾನ ಬರದಂತೆ ರೈಲಿನ ಸರಪಳಿ ಎಳೆದು ಅವರ ದೇಹ ಬಿದ್ದಲ್ಲಿ ಹೋಗಿ ಕಣ್ಣಿರು ಹಾಕಿ ನಾಟಕವಾಡಿದ್ದ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ತನಿಖೆ ಕೈಗೊಂಡು ವಿಚಾರಣೆ ನಡೆಸಿದಾಗ ಎಲ್ಲವನ್ನೂ ಬಾಯಿ ಬಿಟ್ಟಿದ್ದ. ಈ ಕುರಿತು ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಹೊಳಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳವಾರ ಶಿಕ್ಷೆ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.