ವಿಜಯಪುರ: ‘ಒಳಮೀಸಲಾತಿಗೆ ಸಂಬಂಧಿಸಿದಂತೆ ಆಗಸ್ಟ್ 19ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೆ, ಈ ಕುರಿತು ‘ಮಾಡು ಇಲ್ಲವೇ ಮಡಿ’ ಸ್ವರೂಪದ ಹೋರಾಟ ನಡೆಯಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
‘ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವೇ ಈ ಹಿಂದೆ ರಚಿಸಿದ ವಿವಿಧ ಆಯೋಗಗಳು, ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಮಾಧುಸ್ವಾಮಿ ಆಯೋಗದ ವರದಿ ಇದೆ. ಈ ಪೈಕಿ ಯಾವುದಾದರೂ ಒಂದು ವರದಿಯನ್ನು ಸರ್ಕಾರ ಒಪ್ಪಿ, ತಿದ್ದುಪಡಿ ಮಾಡಿಯಾದರೂ ಜಾರಿಗೊಳಿಸಬೇಕು’ ಎಂದು ಶನಿವಾರ ಒತ್ತಾಯಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಒಳಮೀಸಲಾತಿ ಜಾರಿಗೊಳಿಸಲು ಆಗದಿದ್ದರೆ, ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಅನುಷ್ಠಾನಕ್ಕೆ ತರುವುದೇ ಸರ್ಕಾರದ ಆದ್ಯ ಕರ್ತವ್ಯ’ ಎಂದರು.
ಒಳ ಮೀಸಲಾತಿ ಜಾರಿ ಆಗದಿರುವುದಕ್ಕೆ ಕೆಲ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಜೊತೆಗೆ ಕೆಲವು ಸಚಿವರು ಸೇರಿದ್ದಾರೆಗೋವಿಂದ ಕಾರಜೋಳ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.