ADVERTISEMENT

ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:21 IST
Last Updated 6 ನವೆಂಬರ್ 2025, 6:21 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ಇಂಡಿ: ‘ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಿ ನಮ್ಮ ಮತಕ್ಷೇತ್ರಕ್ಕೆ ಇಷ್ಟು ವರ್ಷಗಳ ಕಾಲ ಆದ ಅನ್ಯಾಯವನ್ನು ಸರಿಪಡಿಸುವ ಕಾರ್ಯ ಕಾಂಗ್ರೆಸ್ ಪಕ್ಷದ ವರಿಷ್ಠರು ಮಾಡಬೇಕು’ ಎಂದು ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಆಗ್ರಹಿಸಿದರು.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿಯವರೆಗೂ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಪಕ್ಷಾತೀತವಾಗಿ ಇಂಡಿ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕೆಂಬುವುದು ಕ್ಷೇತ್ರದ ಜನರ ಬಹುದೊಡ್ಡ ಆಶಯವಾಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಿ ಸಚಿವ ಸ್ಥಾನ ವಂಚಿತ ಕ್ಷೇತ್ರ ಎಂಬ ಹಣೆಪಟ್ಟಿ ಅಳಕಿಸುವ ಕಾರ್ಯ ಮಾಡಬೇಕು’ ಎಂದರು.

ವಕೀಲ ಎ.ಎಂ. ಬಿರಾದಾರ ಮಾತನಾಡಿ, ‘ಅಭಿವೃದ್ಧಿ ವಂಚಿತ ಪ್ರದೇಶವಾದ ಇಂಡಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಪಾತ್ರ ಬಹುಮುಖ್ಯವಾಗಿದೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೂರು ಬಾರಿ ಶಾಸಕರಾಗಿ ಉತ್ತಮ ಆಡಳಿತ ನಡೆಸುತ್ತಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ವಕೀಲರಾದ ಎನ್.ಕೆ. ನಾಡಪುರೋಹಿತ, ಎಸ್.ಎಲ್.ನಿಂಬರಗಿಮಠ, ಎ.ಜೆ.ಧನಶೆಟ್ಟಿ, ಡಿ.ಜಿ. ಜೋತಗೊಂಡ, ಎಸ್.ಆರ್.ಮುಜಗೊಂಡ, ಬಿ.ಬಿ. ಬಿರಾದಾರ, ಎಸ್.ಆರ್. ಬಿರಾದಾರ, ವೈ.ಎಸ್. ಪೂಜಾರಿ, ಎಂ.ಎಸ.ಭೋಸಗಿ, ಎಸ್.ಕೆ. ರಾಠೋಡ, ಎಂ.ಎಸ್. ಪಾಟೀಲ, ಬಿ.ಬಿ. ಬಿರಾದಾರ, ಜಿ.ಎಸ್. ಪಾಟೀಲ, ಪಿ.ಬಿ. ಪಾಟೀಲ, ಎ.ಎ. ಗಜಾಕೋಶ, ಜೆ.ಬಿ. ಬೇನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.