ADVERTISEMENT

ಕೆಟ್ಟಿರುವ ಕೈಪಂಪ್ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 6:20 IST
Last Updated 7 ಜುಲೈ 2012, 6:20 IST

ಯಾದಗಿರಿ: ನಗರದ ಪ್ರಮುಖ ರಸ್ತೆಗಳಲ್ಲಿರುವ ಕೈಪಂಪ್‌ಗಳು ಕೆಟ್ಟು ಹೋಗಿದ್ದು, ಸಾರ್ವಜನಿಕರು, ಮಕ್ಕಳು ಪರದಾಡುವಂತಾಗಿದೆ. ಕೂಡಲೇ   ಇವುಗಳನ್ನು ದುರಸ್ತಿ ಮಾಡಬೇಕು ಎಂದು ಟೋಕರಿ ಕೋಲಿ ಸಮಾಜ ಒತ್ತಾಯಿಸಿದೆ.

ಇಲ್ಲಿಯ ಚಿತ್ತಾಪೂರ ರಸ್ತೆಯ ಮುದ್ನಾಳ ಕ್ರಾಸ್ ಬಳಿ, ಹತ್ತಿಕುಣಿ ಕ್ರಾಸ್‌ನ ಬಂದಳ್ಳಿ ರಸ್ತೆಯಲ್ಲಿರುವ ಗಂಗಾ ನಗರ, ಆಂಜನೇಯ ದೇವಸ್ಥಾನದ ಹತ್ತಿರ, ಪದವಿ ಕಾಲೇಜು ಎದುರಿನ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಕೊಳವೆಬಾವಿಗಳು ಕೆಟ್ಟು ನಿಂತಿವೆ. 

ಎಸ್ಪಿ ಕಚೇರಿ ಬಳಿ ಇರುವ ಕೈಪಂಪ್ ಕೆಟ್ಟಿರುವುದರಿಂದ ಕಚೇರಿಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ತೊಂದರೆ ಅನುಭವಿಸುವಂತಾಗಿದೆ.  ಈಗ ಮಳೆಗಾಲ ಇರುವುದರಿಂದ ಈ ಕೊಳವೆಬಾವಿಗಳ ಬಳಿ ಕೊಳಚೆ ನೀರು ನಿಲ್ಲುತ್ತಿದ್ದು, ಇದರಿಂದ ರೋಗಗಳು ಹರಡುವ ಸಾಧ್ಯತೆ ಇದೆ.

ಜಿಲ್ಲಾಡಳಿತ, ನಗರಸಭೆ ತಕ್ಷಣ ಗಮನ ಹರಿಸಿ ಕುಡಿಯುವ ನೀರಿನ ಕೈಪಂಪ್‌ಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಮಾತಾ ಮಾಣಿಕೇಶ್ವರಿ    ಸ್ವ-ಸಹಾಯ ಸಂಘ ಮತ್ತು ವಿಠ್ಠಲ ಹೆರೂರು ಅಭಿಮಾನಿಗಳ ಸಂಘಗಳ  ವತಿಯಿಂದ ಹೋರಾಟ ಮಾಡಲಾಗುವುದು ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.