ADVERTISEMENT

ಬಿರುಗಾಳಿಗೆ ನೆಲಕಚ್ಚಿದ ಫಾರ್ಮ್‌ಹೌಸ್

​ಪ್ರಜಾವಾಣಿ ವಾರ್ತೆ
Published 5 ಮೇ 2018, 14:27 IST
Last Updated 5 ಮೇ 2018, 14:27 IST
ಯಾದಗಿರಿ ಸಮೀಪದ ನಾಯ್ಕಲ್ ಸಮೀಪದ ಬಲಕಲ್ ಗ್ರಾಮದಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಕುರಿ ಫಾರ್ಮ್ ಹೌಸ್‌
ಯಾದಗಿರಿ ಸಮೀಪದ ನಾಯ್ಕಲ್ ಸಮೀಪದ ಬಲಕಲ್ ಗ್ರಾಮದಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಕುರಿ ಫಾರ್ಮ್ ಹೌಸ್‌   

ಯಾದಗಿರಿ: ಗುರುವಾರ ಬೀಸಿದ ಬಿರುಗಾಳಿಗೆ ಸಮೀಪದ ಬಲಕಲ್, ನಾಲ್ವಡಿಗಿ, ಚಟ್ನಳ್ಳಿ ಗ್ರಾಮಗಳಲ್ಲಿನ ಗುಡಿಸಲುಗಳು, ಶೆಡ್‌ಗಳ ಪತ್ರಾಸ್‌ಗಳು ಹಾರಿ ಹೋಗಿವೆ. ಇದರಿಂದ ಆಶ್ರಯ ಕಳೆದುಕೊಂಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಲಕಲ್ ಗ್ರಾಮದ ಸಿದ್ದಣ ಅಗಸಿಮನಿ ಎಂಬುವರಿಗೆ ಸೇರಿದ ಕುರಿಗಳ ಫಾರ್ಮ್ ಹೌಸ್‌ನ ಪತ್ರಾಸ್‌ಗಳು ಸಂಪೂರ್ಣ ಗಾಳಿಗೆ ಹಾರಿಹೋಗಿವೆ. ಫಾರ್ಮ್‌ ಹೌಸ್ ಸಂಪೂರ್ಣ ನೆಲ ಕಚ್ಚಿದೆ. ಫಾರ್ಮ್ ಹೌಸ್‌ನಲ್ಲಿರುವ 25ಕುರಿಗಳು ಪ್ರಾಣಪಾಯದಿಂದ ಪಾರಾಗಿವೆ. ಸಂಗ್ರಹಿಸಿದ್ದ ಮೇವು, ಇತರೆ ವಸ್ತುಗಳು ಸೇರಿ ಸುಮಾರು ₹70 ಸಾವಿರದಷ್ಟು ಅಂದಾಜು ಹಾನಿಯಾಗಿದೆ ಎಂದು ಬಲಕಲ್ ಗ್ರಾಮದ ನಿವಾಸಿ ಸಿದ್ದಣ ತಿಳಿಸಿದ್ದಾರೆ.

ಬಿರುಗಾಳಿಗೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆದರು. ಈಗ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜೆಸ್ಕಾಂ ಶುಕ್ರವಾರ ಮಧ್ಯಾಹ್ನ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.