ADVERTISEMENT

ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 9:10 IST
Last Updated 23 ಸೆಪ್ಟೆಂಬರ್ 2011, 9:10 IST

ಯಾದಗಿರಿ: ಯುವಪೀಳಿಗೆಯಿಂದಲೇ ದೇಶ ಸದೃಢವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ನಾಗನಗೌಡ ಸುಬೇದಾರ ಹೇಳಿದರು.

ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಹೆಚ್ಚು ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ಮಾಡಿದರು.

ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ ಮಾತನಾಡಿ, ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟದ ಮೂಲಕ ಜಿಲ್ಲೆಯಲ್ಲಿರುವ ಕ್ರೀಡಾಪಟುಗಳನ್ನು ಹೆಕ್ಕಿ ತೆಗೆಯುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಮಾತನಾಡಿ, ಕ್ರೀಡಾಕೂಟಗಳು ಕೇವಲ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿ ಉಳಿಯಬಾರದು. ಯುವಕರು ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೂಗಪ್ಪ ಪಾಟೀಲ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ. ಪಾಟೀಲ ವಂದಿಸಿದರು. ಸುಮಾರು 600 ಯುವಕ, ಯುವತಿಯರು ಪಾಲ್ಗೊಂಡಿದ್ದರು.

ಕ್ರೀಡಾಕೂಟದ ಫಲಿತಾಂಶ
ಬಾಲಕಿಯರ ವಿಭಾಗ: 100 ಮೀ. ಓಟ: ರೇಖಾ ಎಸ್. (ಸುರಪುರ) ಪ್ರಥಮ, ಅನ್ನಪೂರ್ಣಾ ಎನ್. (ಸುರಪುರ) ದ್ವಿತೀಯ), 200 ಮೀ. ಓಟ: ಭಾಗ್ಯಶ್ರೀ (ಶಹಾಪುರ) ಪ್ರಥಮ, ನೀಲಮ್ಮ (ಸುರಪುರ) ದ್ವಿತೀಯ, 400 ಮೀ. ಓಟ: ದೇವಮ್ಮ (ಶಹಾಪುರ) ಪ್ರಥಮ, ಮರೆಪ್ಪ (ಶಹಾಪುರ) ದ್ವಿತೀಯ, 800 ಮೀ. ಓಟ: ಮರೆಪ್ಪ (ಶಹಾಪುರ) ಪ್ರಥಮ, ರೇಖಾ (ಸುರಪುರ) ದ್ವಿತೀಯ, 1500 ಮೀ. ಓಟ: ಅನ್ನಪೂರ್ಣ (ಸುರಪುರ) ಪ್ರಥಮ, ಭಾಗ್ಯಶ್ರೀ (ಶಹಾಪುರ) ದ್ವಿತೀಯ, ರಿಲೆ: ಶಹಾಪುರ ತಂಡ ಪ್ರಥಮ, ಸುರಪುರ ತಂಡ
ದ್ವಿತೀಯ.
ಗುಂಪು ಆಟ: ಕಬಡ್ಡಿ: ಸುರಪುರ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ಖೋಖೋ: ಸುರಪುರ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್: ಶಹಾಪುರ ತಂಡ ಪ್ರಥಮ, ಯಾದಗಿರಿ ತಂಡ
ದ್ವಿತೀಯ.
ಬಾಲಕರ ವಿಭಾಗ: 100 ಮೀ. ಓಟ: ನಾಗೇಶ ಆರ್.ಎಂ. (ಯಾದಗಿರಿ) ಪ್ರಥಮ, ಮಹ್ಮದ್ ಜಾಫರ್ (ಶಹಾಪುರ) ದ್ವಿತೀಯ, 200 ಮೀ. ಓಟ: ನಾಗೇಶ ಆರ್.ಎಂ. (ಯಾದಗಿರಿ) ಪ್ರಥಮ, ಮಹಿನೋದ್ದೀನ್ (ಯಾದಗಿರಿ) ದ್ವಿತೀಯ, 400 ಮೀ. ಓಟ: ಮಲ್ಲಿಕಾರ್ಜುನ ಎಂ. (ಶಹಾಪುರ) ಪ್ರಥಮ, ಮಲ್ಲಿಕಾರ್ಜುನ

ಎಚ್. (ಯಾದಗಿರಿ) ದ್ವಿತೀಯ, 800 ಮೀ. ಓಟ: ಮಕ್ತುಮ್ (ಶಹಾಪುರ) ಪ್ರಥಮ, ಶಿವಶರಣ (ಶಹಾಪುರ) ದ್ವಿತೀಯ, 1500 ಮೀ. ಓಟ: ವಿರೇಶ ಟಿ. (ಶಹಾಪುರ) ಪ್ರಥಮ, ಮಲ್ಲಿಕಾರ್ಜುನ ಎಚ್. (ಯಾದಗಿರಿ) ದ್ವಿತೀಯ, 3000 ಮೀ. ಓಟ: ಪರಸಪ್ಪ ಎಸ್. (ಸುರಪುರ) ಪ್ರಥಮ, ಸಿದ್ಧಲಿಂಗ ಆರ್. (ಶಹಾಪುರ) ದ್ವಿತೀಯ, ಉದ್ದ ಜಿಗಿತ:ನಾಗೇಶ ಆರ್.ಎಂ. (ಯಾದಗಿರಿ) ಪ್ರಥಮ, ಹಣಮಂತ (ಶಹಾಪುರ) ದ್ವಿತೀಯ, ಎತ್ತರ ಜಗಿತ: ಮಲ್ಲು ನಾಯಕ (ಶಹಾಪುರ) ಪ್ರಥಮ, ತಿಪ್ಪರಡ್ಡಿ (ಯಾದಗಿರಿ) ದ್ವಿತೀಯ, ತ್ರಿವಿಧ ಜಿಗಿತ: ದೊಡ್ಡಪ್ಪ (ಯಾದಗಿರಿ) ಪ್ರಥಮ, ಮಿಥುನ್ (ಯಾದಗಿರಿ) ದ್ವಿತೀಯ, ಗುಂಡು ಎಸೆತ: ರಾಘವೇಂದ್ರ (ಶಹಾಪುರ) ಪ್ರಥಮ, ಮಲ್ಲುನಾಯಕ (ಯಾದಗಿರಿ) ದ್ವಿತೀಯ, ಚಕ್ರ ಎಸೆತ: ಪ್ರವೀಣಕುಮಾರ (ಸುರಪುರ) ಪ್ರಥಮ, ಅನಿಲ ನಾಯಕ (ಯಾದಗಿರಿ) ದ್ವಿತೀಯ, ಭಲ್ಲೆ ಎಸೆತ: ತಾಫಿಕ್ (ಯಾದಗಿರಿ) ಪ್ರಥಮ, ರಾಜೇಸಾಬ (ಶಹಾಪುರ) ದ್ವಿತೀಯ, ಹ್ಯಾಮರ್ ಎಸೆತ: ಮಲ್ಲೇಶ (ಯಾದಗಿರಿ) ಪ್ರಥಮ,  ರಿಲೆ: ಶಹಾಪುರ ತಂಡ ಪ್ರಥಮ, ಸುರಪುರ ತಂಡ ದ್ವಿತೀಯ.

ಗುಂಪು ಸ್ಪರ್ಧೆ: ಕಬಡ್ಡಿ: ಸುರಪುರ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ಖೋಖೋ: ಸುರಪುರ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ವಾಲಿಬಾಲ್: ಸುರಪುರ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ಥ್ರೋಬಾಲ್: ಯಾದಗಿರಿ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ, ಫುಟ್‌ಬಾಲ್: ಯಾದಗಿರಿ ತಂಡ ಪ್ರಥಮ, ಶಟಲ್ ಬ್ಯಾಡ್ಮಿಂಟನ್: ಯಾದಗಿರಿ ತಂಡ ಪ್ರಥಮ, ಶಹಾಪುರ ತಂಡ ದ್ವಿತೀಯ,
 ಲಾನ್ ಟೆನಿಸ್: ಮಲ್ಲಿಕಾರ್ಜುನ ಯಾದವ ಪ್ರಥಮ, ಸಂಜೀವ ರಾಯಚೂರಕರ್ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್: ಅಜಯರಡ್ಡಿ ಪ್ರಥಮ, ಜಗದೀಶ ಹೆಂದೆ ದ್ವಿತೀಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.