ADVERTISEMENT

ವಿದ್ಯಾರ್ಥಿಗಳಿಗೆ ಸೌರ ದೀಪ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:25 IST
Last Updated 4 ಅಕ್ಟೋಬರ್ 2011, 9:25 IST

ಹುಣಸಗಿ: ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸಮೀಪದ ಬೊಮ್ಮಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇಲ್ಕೊ ಸೋಲಾರ್ ಕಂಪೆನಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸೌರ ದೀಪ ವಿತರಿಸಲಾಯಿತು.

ಸೌರದೀಪ ವಿತರಿಸಿದ ಸಚಿವ ನರಸಿಂಹ ನಾಯಕ (ರಾಜುಗೌಡ), ಪಟ್ಟಣ ಪ್ರದೇಶ ಮಕ್ಕಳಂತೆ, ಗ್ರಾಮೀಣ ಪ್ರದೇಶ ಮಕ್ಕಳೂ ಓದಿನಲ್ಲಿ ಮುಂದೆ ಬರಲು ಸಹಾಯ ಮಾಡಿದ ಸೇಲ್ಕೊ ಸೋಲಾರ್ ಕಂಪೆನಿಯ ಕಾರ್ಯವನ್ನು ಶ್ಲಾಘಿ ಸಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸೇಲ್ಕೊ ಕಂಪೆನಿಯಿಂದ ಉಚಿತ ಸೌರದೀಪ ನೀಡಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ, ಉಪ ಕಾರ್ಯದರ್ಶಿ ಡಿ.ವಿ. ಭೋಸಲೆ, ಡಿಡಿಪಿಐ ಬಸ್ಸಣ್ಣ ಮಹಾಂತಗೌಡರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಗೌಡ ಪಾಟೀಲ, ಮಜರ್ ಹುಸೇನ್, ವೀರಸಂಗಪ್ಪ ಹಾವೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಡಿವೆಪ್ಪ, ಸಿಆರ್‌ಪಿ ವೀರಣ್ಣಗೌಡ ಪಾಟೀಲ, ಸೇಲ್ಕೊ ಕಂಪೆನಿಯ ಶ್ರೀಶೈಲ ಬಬಲೇಶ್ವರ ಇದ್ದರು. ಶರಣಯ್ಯ ನಿರೂಪಿಸಿದರು. ಟಿ. ಶ್ರೀನಿವಾಸ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.