ADVERTISEMENT

ಬಂಜಾರ ಭವನಕ್ಕೆ ₹ 2 ಕೋಟಿ

ಈಗಾಗಲೇ ₹1 ಕೋಟಿ ಅನುದಾನ ಬಿಡುಗಡೆ: ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 16:45 IST
Last Updated 15 ನವೆಂಬರ್ 2020, 16:45 IST
ಶಹಾಪುರ ತಾಲ್ಲೂಕಿನ ಹೋತಪೇಟ ತಾಂಡಾದಲ್ಲಿ ಸಂತ ಡಾ.ರಾಮರಾವ್ ಮಹಾರಾಜರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ನಗಾರಿ ಬಾರಿಸಿ ಚಾಲನೆ ನೀಡಿದರು. ಸಂಸದ ಡಾ.ಉಮೇಶ ಜಾಧವ ಇದ್ದರು
ಶಹಾಪುರ ತಾಲ್ಲೂಕಿನ ಹೋತಪೇಟ ತಾಂಡಾದಲ್ಲಿ ಸಂತ ಡಾ.ರಾಮರಾವ್ ಮಹಾರಾಜರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ನಗಾರಿ ಬಾರಿಸಿ ಚಾಲನೆ ನೀಡಿದರು. ಸಂಸದ ಡಾ.ಉಮೇಶ ಜಾಧವ ಇದ್ದರು   

ಶಹಾಪುರ: ತಾಲ್ಲೂಕಿನ ಕನ್ಯಾಕೊಳ್ಳೂರ ರಸ್ತೆಯ ಬಳಿ ಬಂಜಾರ ಭವನ ನಿರ್ಮಾಣಕ್ಕೆ 1.20 ಎಕರೆ ಜಮೀನು ಮಂಜೂರು ಮಾಡಿದ್ದಲ್ಲದೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಭವನ ನಿರ್ಮಾಣಕ್ಕೆ ₹2 ಕೋಟಿ ಮಂಜೂರಾಗಿದೆ. ಈಗಾಗಲೇ ₹1 ಕೋಟಿ ಅನುದಾನ ಬಿಡುಗಡೆಯಾಗಿದೆ. ಡಿಸೆಂಬರ್ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲ್ಲೂಕಿನ ಹೋತಪೇಟ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಡಾ.ರಾಮರಾವ್ ಮಹಾರಾಜರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರ ಸಮುದಾಯದವರು ಅತ್ಯಂತ ಶ್ರಮಜೀವಿಗಳು. ಆದರೂ ಬಡತನವಿದೆ. ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ತಮ್ಮ ಇತಿಮಿತಿಯಲ್ಲಿ ನೆರವು ನೀಡಬೇಕು ಎಂದರು.

ADVERTISEMENT

ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಡಾ.ರಾಮರಾವ್ ಮಹಾರಾಜರು ಬಂಜಾರ ಸಮಾಜದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ್ದಾರೆ. ದುಶ್ಚಟಗಳಿಂದ ಅದೆಷ್ಟೋ ಜನ ಬಲಿಯಾಗುವುದನ್ನು ತಡೆದು ನಿಲ್ಲಿಸಿ ಅವರಿಗೆ ಅಕ್ಷರದ ಬೆಳಕು ತೋರಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಶಿವಮಹಾಂತ ಚಂದಾಪುರ,ನಾಗಣ್ಣಗೌಡ ಸುಬೇದಾರ ಹಾಗೂ ಬಂಜಾರ ಸಮಾಜದ ಮುಖಂಡರಾದ ವಿಠಲ ಜಾದವ, ಶಿವರಾಮ ಚವ್ಹಾಣ, ನಾಮದೇವ ರಾಠೋಡ, ಮಾನಸಿಂಗ್ ಚವ್ಹಾಣ, ದೇವರಾಜ ನಾಯಕ ಉಳ್ಳೆಸೂಗೂರ, ಲೋಕೇಶ ಜಾಧವ, ರವಿ ರಾಠೋಡ, ಭಾಷು ನಾಯಕ, ನಿಂಗ್ಯಾ ನಾಯಕ, ಪರಶುರಾಮ ಚವ್ಹಾಣ, ಪ್ರೇಮ ಚವ್ಹಾಣ, ರಾಜ ಚಾಮನಾಳ, ಸುಭಾಸ ನಾಯಕ, ತಾರಾಸಿಂಗ್, ಚಂದ್ರಶೇಖರ ಜಾಧವ, ಚಂದ್ರಕಾಂತ ಚಾಮನಾಳ, ತಿಪ್ಪಣ್ಣ, ಹೀರಾಸಿಂಗ್, ಘೇನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.