ADVERTISEMENT

ಯಾದಗಿರಿ: 100 ಕೋಟಿ ಲಸಿಕಾಕರಣ ಸಾಧನೆ ಸಂಭ್ರಮಾಚರಣೆ- ಜಿಲ್ಲಾಧಿಕಾರಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 5:11 IST
Last Updated 23 ಅಕ್ಟೋಬರ್ 2021, 5:11 IST
ದೇಶ 100 ಕೋಟಿ ಲಸಿಕಾಕರಣದ ಸಾಧನೆ ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿದರು
ದೇಶ 100 ಕೋಟಿ ಲಸಿಕಾಕರಣದ ಸಾಧನೆ ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿದರು   

ಯಾದಗಿರಿ: ’ಕೋವಿಡ್‌–19 ನಿರ್ಮೂಲನೆಗೆ ಟೊಂಕಕಟ್ಟಿ ನಿಂತಿರುವ ದೇಶವು ಲಸಿಕಾ ಅಭಿಯಾನದಲ್ಲಿ 100 ಕೋಟಿ ಡೋಸ್ ಲಸಿಕಾಕರಣ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ. ಈ ಸಾಧನೆಯಿಂದಾಗಿ ದಾಖಲೆ ಪ್ರಮಾಣದಲ್ಲಿ ಲಸಿಕಾಕರಣ ನೀಡಿದ ವಿಶ್ವದ 2ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ‘ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಕಚೇರಿಆವರಣದಲ್ಲಿ ದೇಶ 100 ಕೋಟಿ ಲಸಿಕಾಕರಣದ ಸಾಧನೆ ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂಭ್ರಮಕ್ಕೆ ಸಾಕಷ್ಟು ಅಧಿಕಾರಿಗಳು ಶ್ರಮವಹಿಸಿದ್ದಾರೆ. ಜಿಲ್ಲೆಯಲ್ಲಿಯೂ ಶೇ 75ರಷ್ಟು ಲಸಿಕಾಕರಣ ಪೂರೈಸಿದೆ. ಇನ್ನೂ ಬಾಕಿ ಇರುವ ಶೇ 25ರಷ್ಟು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದರು.

ADVERTISEMENT

ಜನರು ಲಸಿಕಾಕರಣಕ್ಕೆ ಹಿಂಜರಿದಾಗ ಅವರಿಗೆ ಅದರ ಬಗ್ಗೆ ಅರಿವು ಮೂಡಿಸಿ, ಮನವೊಲಿಸುವ ಮೂಲಕ ಜಿಲ್ಲಾಮಟ್ಟದ ಅಧಿಕಾರಿಗಳು ಲಸಿಕಾ ಮೇಳ ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.

ಶೇ 100 ರಷ್ಟು ಲಸಿಕಾಕರಣ ಪೂರೈಸುವುದರ ಮೂಲಕ 3ನೇ ಅಲೆಯನ್ನು ಜಿಲ್ಲಾಡಳಿತದಿಂದ ಎದುರಿಸಲು ಸಮರ್ಥರಾಗಿದ್ದೇವೆ ಎಂದರು.

ಜಿಲ್ಲೆಯಲ್ಲಿ 8.38 ಲಕ್ಷ ಜನರಿಗೆ ಲಸಿಕಾಕರಣ ಗುರಿಯಿದ್ದು, ಈಗಾಗಲೇ 6 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಇನ್ನುಳಿದ ಜನರಿಗೆ ಮನವೊಲಿಸಿ ಲಸಿಕೆ ಹಾಕಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್, ಕಾರ್ಯಕ್ರಮ ಅಧಿಕಾರಿ ಡಾ.ಸಾಧಿಕ್ ಹಾಗೂ ಆರೋಗ್ಯ ಇಲಾಖಾಧಿಕಾರಿ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.