ADVERTISEMENT

ಯಾದಗಿರಿ | 10,000 ಕೋವಿಡ್‌ ವರದಿ ಬಾಕಿ

256 ಕೊರೊನಾ ಪ್ರಕರಣ ಸಕ್ರಿಯ, ಸೋಮವಾರ ಒಂದು ಕೇಸಿಲ್ಲ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:50 IST
Last Updated 1 ಜೂನ್ 2020, 17:50 IST

ಯಾದಗಿರಿ: ಸೋಮವಾರ ಜಿಲ್ಲೆಯಲ್ಲಿ ಒಂದೂಕೋವಿಡ್‌–19 ಪತ್ತೆಯಾಗಿಲ್ಲ. ಇದರಿಂದ ತಾತ್ಕಾಲಿಕವಾಗಿ ಜನತೆಗೆ ಕೊಂಚ ನೆಮ್ಮದಿ ಸಿಕ್ಕಿದೆ. ಆದರೆ 10,000 ವರದಿಗಳು ಬಾಕಿ ಇದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮೇ 12ರಂದು ಪತ್ತೆಯಾದ ಮೊದಲ ಕೋವಿಡ್‌–19 ಪ್ರಕರಣಗಳು ಅಂದಿನಿಂದ ನಿರಂತರವಾಗಿ ಏರುತ್ತಲೇ ಸಾಗಿತ್ತು. ಭಾನುವಾರ 44 ಕೇಸ್‌ ದೃಢಪಟ್ಟಿತ್ತು. ಆದರೆ, ಸೋಮವಾರ ಒಂದು ಕೋವಿಡ್‌ ಪತ್ತೆಯಾಗಿಲ್ಲ. ಕೋವಿಡ್‌ ಪರೀಕ್ಷೆಗೆ ಬೇರೆ ಜಿಲ್ಲೆಯನ್ನು ಆಶ್ರಯಿಸಿರುವುದರಿಂದ ವರದಿಗಳು ತಡವಾಗುತ್ತಿವೆ. ಇದರಿಂದ ಮತ್ತಷ್ಟು ಆತಂಕ ಶುರುವಾಗಿದೆ.

ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಜೂನ್ 1ರವರೆಗೆ 285 ವರದಿ ಪಾಸಿಟಿವ್ ಮತ್ತು 7,463 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 517 ಮಾದರಿಗಳು ಸೇರಿದಂತೆ 10,000 ಮಾದರಿಗಳ ವರದಿ ಬರಬೇಕಿದೆ.

ADVERTISEMENT

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 285 ವ್ಯಕ್ತಿಗಳ ಪೈಕಿ 28 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಉಳಿದ 256 ಪ್ರಕರಣಗಳು ಸಕ್ರಿಯವಾಗಿರುತ್ತವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 756 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,081 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 5 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ.

ಜಿಲ್ಲೆಯ 161 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 7,917 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜೂನ್ 1ರಂದು 1,234 ಜನರನ್ನು ಕ್ವಾರಂಟೈನ್ ಸೆಂಟರ್‌ಗಳಿಂದ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.